ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಂಗಳೂರಿನಲ್ಲಿ ಬಿಎಸ್‌ಎನ್‌ಎಲ್ 3ಜಿ ಸೇವೆಗೆ ಚಾಲನೆ (BSNL 3G | Mobile Services | Mangalore | Udupi | BSNL 2G)
Bookmark and Share Feedback Print
 
PTI
ಕರಾವಳಿ ತೀರದ ನಗರಗಳ ಜನತೆಯ ಬಹುನಿರೀಕ್ಷಿತ, 3ಜಿ ಮೊಬೈಲ್‌ ಬಿಎಸ್‌ಎನ್‌ಎಲ್ ಸೇವೆಯನ್ನು 6 ನಗರ/ಪಟ್ಟಣಗಳಿಗೆ ವಿಸ್ತರಿಸಲಾಗಿದೆ ಎಂದು ಟೆಲಿಕಾಂ ಕಂಪೆನಿಯ ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು,ಉಡುಪಿ,ಸುರತ್ಕಲ್‌ ,ಬೈಕಂಪಾಡಿ, ಉಳ್ಳಾಲ ಮತ್ತು ದೇರಳಕಟ್ಟೆ ಪಟ್ಟಣಗಳಿಗೆ ವಿಸ್ತರಿಸಿಲಾಗಿದ್ದು, 3ಜಿ ಸೇವೆ ಪಡೆಯುವ ಬಳಕೆದಾರರು ವಿಡಿಯೋ ಕರೆಗಳು, 3.1ಎಂಬಿಪಿಎಸ್ ಹೈಸ್ಪೀಡ್ ಇಂಟರ್‌ನೆಟ್ ಮತ್ತು ಮೊಬೈಲ್ ಟಿವಿ ಸೌಲಭ್ಯವನ್ನು ಪಡೆಯಬಹುದಾಗಿದೆ.

ನೂತನ ಬಿಎಸ್‌ಎನ್‌ಎಲ್ 3ಜಿ ಗ್ರಾಹಕರಿಗಾಗಿ ವಿಶೇಷ ರಿಯಾಯತಿಗಳನ್ನು ಘೋಷಿಸಿದ್ದು, 50 ವಿಡಿಯೋ ಕರೆಗಳು ಮತ್ತು 25ಎಂಬಿ ಡಟಾ ಬಳಕೆಯನ್ನು ಅರಂಭಿಕ ಕೊಡುಗೆಯಾಗಿ ನೀಡುತ್ತಿದ್ದು, ಅದನ್ನು ಹೊರತುಪಡಿಸಿ ಸ್ಥಳೀಯ ವೈಸ್ ಮೇಲ್ ಬಳಕೆ, ಪ್ರತಿ ನಿಮಿಷಕ್ಕೆ 30ಪೈಸೆ ಸ್ಥಳೀಯ ಕರೆ ದರ ಹಾಗೂ ಎಲ್ಲಾ ಎಸ್‌ಟಿಡಿ ವಿಡಿಯೋ ಕರೆಗಳಿಗೆ 50 ಪೈಸೆ ದರ ನಿಗದಿಪಡಿಸಲಾಗಿದೆ.

ಕರ್ನಾಟಕದ ಬಿಎಸ್‌ಎನ್‌ಎಲ್ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ.ರಾಘವನ್ ಮಾತನಾಡಿ, ಏಪ್ರಿಲ್‌ 2010ರೊಳಗೆ ಕರ್ನಾಟಕದ ಎಲ್ಲ ಜಿಲ್ಲಾ ಕೇಂದ್ರಗಳು ಸೇರಿದಂತೆ 32 ನಗರಗಳಿಗೆ 3ಜಿ ಸೇವಾ ಸೌಲಭ್ಯವನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯದ ಇತರ ಭಾಗಗಳಲ್ಲಿ 3ಜಿ ವ್ಯವಸ್ಥೆ ಅಳವಡಿಕೆ ಕುರಿತಂತೆ ಬಿಡುಗಡೆಗೆ ಮುನ್ನ ಪರೀಕ್ಷಿಸಲಾಗುತ್ತಿದ್ದು, ಮುಂದಿನ ತಿಂಗಳಾಂತ್ಯಕ್ಕೆ 3ಜಿ ಸೇವೆಯನ್ನು ಒದಗಿಸಲಾಗುವುದು. ಕಳೆದ ಮೂರು ವಾರಗಳ ಹಿಂದೆ ಬೆಂಗಳೂರಿನಲ್ಲಿ 3ಜಿ ಸೇವೆಯನ್ನು ನೀಡಲಾಗಿದ್ದು, ಕೆಲವೇ ದಿನಗಳಲ್ಲಿ 30 ಸಾವಿರ ಗ್ರಾಹಕರನ್ನು ಹೊಂದಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

3ಜಿ ಮೊಬೈಲ್ ಸೇವೆಯನ್ನು ಉದ್ಘಾಟಿಸಿದ ನಂತರ ಮಾಹಿತಿ ನೀಡಿ, 2ಜಿ ಮತ್ತು 3ಜಿ ಸೇವೆಗಳನ್ನು ಒದಗಿಸಲು ಕರ್ನಾಟಕ ರಾಜ್ಯದಲ್ಲಿ ಮೊಬೈಲ್ ಗೋಪುರುಗಳ ಸಂಖ್ಯೆಯನ್ನು 6 ಸಾವಿರಕ್ಕೆ ಹೆಚ್ಚಿಸಲಾಗುವುದು. 3ಜಿ ಸೇವೆ ನೀಡಲು ವೆಚ್ಚವಾದ 200 ಕೋಟಿ ರೂಪಾಯಿ ಸೇರಿದಂತೆ, ಒಟ್ಟು 900 ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ತಿಳಿಸಿದ್ದಾರೆ.

ಬಿಎಸ್‌ಎನ್‌ಎಲ್ 3ಜಿ ಜಿಎಸ್‌ಎಂ ಗ್ರಾಹಕರಿಗೆ 59 ರೂಪಾಯಿಗಳ ದರದಲ್ಲಿ ಪ್ರೀಪೇಟ್ ಸಂಪರ್ಕ ಒದಗಿಸುತ್ತಿದ್ದು, ಮೊದಲ ಬಾರಿಗೆ ರಿಚಾರ್ಚ್ ಮಾಡಿದ ಬಳಕೆದಾರರು ಕಡಿಮೆ ದರದಲ್ಲಿ ವಿಡಿಯೋ, ವೈಸ್ ಮತ್ತು ಡಟಾಗಳನ್ನು ಪಡೆಯಬಹುದಾಗಿದೆ.

ಪ್ರಸ್ತುತ 2ಜಿ ಪ್ರೀಪೇಡ್ ಹೊಂದಿರುವ ಗ್ರಾಹಕರು, 3ಜಿ ಸೇವೆಯನ್ನು ಪಡೆಯಲು ಕೇವಲ “M3G120”ಎನ್ನುವ ಸಂದೇಶವನ್ನು 53733ಗೆ ಕಳುಹಿಸಬೇಕಾಗುತ್ತದೆ. ಪೋಸ್ಟ್‌ಪೇಡ್‌ ಗ್ರಾಹಕರು M3G25 ಸಂದೇಶವನ್ನು ಟೈಪ್ ಮಾಡಿ 53733ಗೆ ಕಳುಹಿಸಿದಲ್ಲಿ ಸಂಪರ್ಕ ನೀಡುವ ಮುನ್ನ 3ಜಿ ಸೇವೆ ಒದಗಿಸುವ ಬಗ್ಗೆ ಮಾಹಿತಿ ಕೋರಲಾಗುತ್ತದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ