ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏಪ್ರಿಲ್‌ನಲ್ಲಿ ವಾಹನಗಳ ಬೆಲೆ ಏರಿಕೆ: ಟಾಟಾ ಮೋಟಾರ್ಸ್ (Safari | Tata Motors | hike prices | Union Budget 2010 | Auto)
Bookmark and Share Feedback Print
 
ತಮ್ಮ ಕಂಪನಿಗಳ ವಾಹನ ಬೆಲೆಯನ್ನು ಏಪ್ರಿಲ್ ತಿಂಗಳಿನಲ್ಲಿ ಬಹುತೇಕ ಹೆಚ್ಚಳ ಮಾಡುವ ಸಾಧ್ಯತೆ ಇರುವುದಾಗಿ ದೇಶದ ಪ್ರತಿಷ್ಠಿತ ಟಾಟಾ ಮೋಟಾರ್ಸ್ ಕಂಪನಿ ಸೋಮವಾರ ತಿಳಿಸಿದೆ.

ಪ್ರಸಕ್ತ ಸಾಲಿನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ಹೆಚ್ಚುವರಿ ತೆರಿಗೆ ಹೊರೆ ಬಿದ್ದಿರುವ ಪರಿಣಾಮ ಬೆಲೆ ಹೆಚ್ಚಳ ಅನಿವಾರ್ಯ ಎಂದು ಈಗಾಗಲೇ ಪ್ರತಿಷ್ಠಿತ ಕಂಪನಿಗಳು ಘೋಷಿಸಿದ್ದವು. ಆ ನಿಟ್ಟಿನಲ್ಲಿ ಟಾಟಾ ಕಂಪನಿ ಕೂಡ ಬೆಲೆ ಹೆಚ್ಚಳ ಮಾಡಲಿದೆ ಎಂದು ಟಾಟಾ ಮೋಟಾರ್ಸ್ ಪ್ಯಾಸೆಂಜರ್ ಕಾರ್ ಡಿವಿಶನ್ ಅಧ್ಯಕ್ಷ ರಾಜೀವ್ ದುಬೆ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

'ಆದರೆ ವಾಹನಗಳ ಬೆಲೆಯನ್ನು ಎಷ್ಟು ಹೆಚ್ಚಿಸಲಾಗುತ್ತೆ ಎಂಬುದನ್ನು ಈಗಾಗಲೇ ಹೇಳಲಾಗದು. ಆದರೆ ಖರೀದಿದಾರರಿಗೆ ಹೆಚ್ಚಿನ ಹೊರೆಯಾಗದಂತೆ ಬೆಲೆ ಹೆಚ್ಚಳ ಮಾಡಲಾಗುತ್ತದೆ' ಎಂದರು.

ಅಲ್ಲದೇ ಪ್ರಸಕ್ತ ಸಾಲಿನಲ್ಲೇ ಸ್ಪೋರ್ಟ್ಸ್ ಯುಟಿಲಿಟಿ ವೆಹಿಕಲ್(ಎಸ್‌ಯುವಿ), ಮಲ್ಟಿ ಪರ್ಪಸ್ ವೆಹಿಕಲ್(ಎಂಪಿವಿ) ಹಾಗೂ ಸೆಡಾನ್ ಅನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು. ಇದರ ಬೆಲೆ ಮಾತ್ರ ಸಫಾರಿ ಕಾರಿಗಿಂತ ಹೆಚ್ಚಳ ಎಂದರು.
ಸಂಬಂಧಿತ ಮಾಹಿತಿ ಹುಡುಕಿ