ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತ: ಫೋರ್ಡ್‌ನ ಸಣ್ಣ ಕಾರು 'ಫಿಗೋ' ಮಾರುಕಟ್ಟೆಗೆ (3.5-4.48 lakh | Ford | small car Figo | India)
Bookmark and Share Feedback Print
 
ಅಮೆರಿಕದ ಪ್ರಸಿದ್ಧ ಕಾರು ತಯಾರಿಕಾ ಸಂಸ್ಥೆಯಾದ ಫೋರ್ಡ್ ಇದೀಗ ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ನಿಟ್ಟಿನಲ್ಲಿ 'ಫಿಗೋ' ಸಣ್ಣ ಕಾರನ್ನು ಮಂಗಳವಾರ ಭಾರತೀಯ ಮಾರುಕಟ್ಟೆಗೆ ಬಿಡುಗಡೆಗೊಳಿಸಿದ್ದು, ಇದರ ಬೆಲೆ 3.5ರಿಂದ 4.48ಲಕ್ಷ ರೂಪಾಯಿ ಎಂದು ಕಂಪನಿ ತಿಳಿಸಿದೆ.

ಭಾರತದಿಂದ ವಿಶ್ವಾದ್ಯಂತ ವಿವಿಧ ಮಾರುಕಟ್ಟೆಗಳಿಗೆ ಕಾರುಗಳನ್ನು ರಫ್ತು ಮಾಡಲಾಗುವುದು ಎಂದು ಫೋರ್ಡ್ ಕಂಪನಿ ವಿವರಿಸಿದ್ದು, ಮೊದಲಿಗೆ ದಕ್ಷಿಣ ಆಫ್ರಿಕಾದಲ್ಲಿ ಹೆಚ್ಚಿನ ಗ್ರಾಹಕರನ್ನು ಸೆಳೆಯುವ ಉದ್ದೇಶ ಹೊಂದಿರುವುದಾಗಿ ಹೇಳಿದೆ.

ಕಡಿಮೆ ಬೆಲೆಯ ಕಾರಿಗಾಗಿ ಬೇಡಿಕೆ ಬಂದಿರುವ ಹಿನ್ನೆಲೆಯಲ್ಲಿ ಫಿಗೋ ಕಾರನ್ನು ಮಾರುಕಟ್ಟೆಗೆ ಪರಿಚಯಿಸುತ್ತಿರುವುದಾಗಿ ಫೋರ್ಡ್ ಇಂಡಿಯಾದ (ಮಾರ್ಕೆಟಿಂಗ್, ಸೇಲ್ಸ್ ಮತ್ತು ಸರ್ವಿಸ್) ಪ್ರಧಾನ ನಿರ್ದೇಶಕ ನಿಗೆಲ್ ವಾರ್ಕ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದರು.

ಫಿಗೋ ಕಾರು 1.2ಲೀಟರ್‌ನ ಪೆಟ್ರೋಲ್ ಹಾಗೂ 1.4ಲೀಟರ್ ಡಿಸೇಲ್ ಎಂಜಿನ್ ಸೇರಿ ಎರಡು ಮಾದರಿಗಳಲ್ಲಿದೆ. ಪೆಟ್ರೋಲ್ ಕಾರಿನ ಬೆಲೆ 3.5ಲಕ್ಷ ಹಾಗೂ ಡಿಸೇಲ್ ಕಾರಿನ ಬೆಲೆ 4.48ಲಕ್ಷ ರೂಪಾಯಿ ಎಂದು ವಿವರಿಸಿದ ಅವರು, ಪೆಟ್ರೋಲ್ ಕಾರು ಪ್ರತಿ ಲೀಟರ್‌ಗೆ 15.6 ಕಿ.ಮೀ. ಮೈಲೇಜ್ ಹಾಗೂ ಡಿಸೇಲ್ ಕಾರು ಪ್ರತಿ 1ಲೀಟರ್‌ಗೆ 20ಕಿ.ಮೀ.ಮೈಲೇಜ್ ನೀಡುತ್ತದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಭಾರತ, ಫೋರ್ಡ್, ಫಿಗೋ, ಅಮೆರಿಕ, ಟಾಟಾ