ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2ಜಿ ಫೋನಲ್ಲೂ ವೀಡಿಯೋ ಚಾಟ್; ಇದು ಹೊಸ ಟೆಕ್ನಾಲಜಿ (dual-SIM phone | video chat | 2G phone | INTEX IN)
Bookmark and Share Feedback Print
 
ಇಂಟೆಕ್ಸ್ ಕಂಪನಿಯು ವೀಡಿಯೋ ಚಾಟ್ ಸೌಲಭ್ಯ ಹೊಂದಿರುವ ತನ್ನ 2ಜಿ ಮಾದರಿಯ ಹೊಸ ಮೊಬೈಲ್ ಫೋನನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದ್ದು, ಇದರ ಬೆಲೆ ಕೇವಲ 3650 ರೂಪಾಯಿಗಳು ಎಂದು ಪ್ರಕಟಿಸಿದೆ.

2ಜಿಯಲ್ಲಿ ನೇರ ವೀಡಿಯೋ ಚಾಟ್ ಅವಕಾಶದೊಂದಿಗೆ ಡುಯೆಲ್ ಸಿಮ್ ಸೌಲಭ್ಯ ಹೊಂದಿರುವ ದೇಶದ ಮೊತ್ತ ಮೊದಲ ಮೊಬೈಲ್ ಫೋನ್ ಇದಾಗಿದೆ ಎಂದು ಕಂಪನಿ ಹೇಳಿಕೊಂಡಿದೆ.

ಇಂಟೆಕ್ಸ್ ಇನ್ 4470 ಎಂಬ ಸರಣಿಯ ಈ ಮೊಬೈಲ್ ಫೋನ್‌ನ ಚಾಟಿಂಗ್ ವಿಭಾಗಕ್ಕೆ 'ಯುಎಂ ಚಾಟ್' ಎಂದು ಹೆಸರಿಡಲಾಗಿದೆ. ಇಲ್ಲಿ ನಾಲ್ವರು ಏಕಕಾಲದಲ್ಲಿ ವೀಡಿಯೋ ಚಾಟ್ ನಡೆಸಬಹುದಾಗಿದೆ. ಇಲ್ಲಿ ಟೆಸ್ಟ್ ಚಾಟಿಂಗ್‌ಗೂ ಅವಕಾಶವಿದೆ.

ಆದರೆ ಈ ಸೌಲಭ್ಯ ಪಡೆಯಲು ಮೊಬೈಲ್ ಜಿಪಿಆರ್ಎಸ್ ವ್ಯವಸ್ಥೆಯನ್ನು ಹೊಂದಿರಬೇಕು. ಹಾಗಿದ್ದಲ್ಲಿ ನೇರ ವೀಡಿಯೋ ಚಾಟಿಂಗ್ ನಡೆಸಬಹುದಾಗಿದೆ. ಮೊಬೈಲ್‌ನಲ್ಲಿ ಫ್ರಂಟ್ ಮತ್ತು ಬ್ಯಾಕ್ ಹೀಗೆ ಎರಡು ಕ್ಯಾಮರಾಗಳಿರುತ್ತವೆ. ಸ್ಥಿರ ಚಿತ್ರಗಳನ್ನು ಕೂಡ ಈ ಕ್ಯಾಮರಾದಲ್ಲಿ ತೆಗೆಯಬಹುದಾಗಿದೆ.

ಇನ್ನುಳಿದಂತೆ ಎಫ್ಎಂ ರೇಡಿಯೋ, ಆಡಿಯೋ, ವೀಡಿಯೋ ಪ್ಲೇಯರ್, ಆಡಿಯೋ ಈಕ್ವಲೈಜರ್, ಬ್ಲೂಟೂತ್, ಪಿಸಿ ಸ್ಯೂಟ್, ವ್ಯಾಪ್, ಮೊಬೈಲ್ ಟ್ರ್ಯಾಕರ್, ಕಾಲ್ ರೆಕಾರ್ಡರ್, 4ಜಿಬಿ ಮೆಮೊರಿ ಮುಂತಾದ ಸೌಲಭ್ಯಗಳನ್ನೂ ಹೊಂದಿದೆ.

ಸದ್ಯದ ಮಟ್ಟಿಗೆ ಬೆಂಗಾಲಿ, ಅರೆಬಿಕ್, ಹಿಂದಿ ಮತ್ತು ಇಂಗ್ಲೀಷ್ ಭಾಷೆಗಳಲ್ಲಿ ಎಸ್ಎಂಎಸ್ ಕಳುಹಿಸಬಹುದು.
ಸಂಬಂಧಿತ ಮಾಹಿತಿ ಹುಡುಕಿ