ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ದಕ್ಷಿಣ ದೆಹಲಿಯಲ್ಲಿ ವೋಲ್ಸ್‌ವ್ಯಾಗನ್ ಶೋ ರೂಂ (Volkswagen | howroom | South Delhi | Car maker)
Bookmark and Share Feedback Print
 
ಭಾರತದಲ್ಲಿ ತನ್ನ ಮಾರುಕಟ್ಟೆಯನ್ನು ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪ್ರತಿಷ್ಠಿತ ಕಾರು ತಯಾರಿಕಾ ಸಂಸ್ಥೆಯಾದ ವೋಲ್ಸ್‌ವ್ಯಾಗನ್ ದಕ್ಷಿಣ ದೆಹಲಿಯಲ್ಲಿ ಪ್ರಥಮ ಬೃಹತ್ ಶೋ ರೂಂ ಅನ್ನು ಮಂಗಳವಾರ ಆರಂಭಿಸಿದೆ.

ವೋಲ್ಸ್‌ವ್ಯಾಗನ್ ಕಾರು ತಯಾರಿಕಾ ಸಂಸ್ಥೆಯಿಂದ ಭಾರತದಲ್ಲಿ ನೂತನ ಪೋಲೋ ಕಾರಿಗೆ ಬೇಡಿಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದಕ್ಷಿಣ ದೆಹಲಿಯಲ್ಲಿ ಶೋ ರೂಂ ಅನ್ನು ತೆರೆಯಲಾಗಿದೆ ಎಂದು ಕಂಪನಿ ತಿಳಿಸಿದೆ.

ಜಾಗತಿಕ ಗುಣಮಟ್ಟ ಹೊಂದಿರುವ ವೋಲ್ಸ್‌ವ್ಯಾಗನ್ ಕಾರು ಈಗಾಗಲೇ ಪ್ರಸಿದ್ಧಿಯಾಗಿದೆ. ಆದರೂ ಗ್ರಾಹಕರ ವಿಶ್ವಾಸವನ್ನು ಮತ್ತಷ್ಟು ಗಳಿಸುವ ನಿಟ್ಟಿನಲ್ಲಿ ಮತ್ತಷ್ಟು ಉತ್ತಮ ಸೇವೆ ನೀಡುವುದಕ್ಕೆ ಕಂಪನಿ ಬದ್ಧವಾಗಿರುವುದಾಗಿ ದಕ್ಷಿಣ ದೆಹಲಿಯ ಡೀಲರ್ ಪ್ರಿನ್ಸಿಪಾಲ್ ಎಸ್.ಎಸ್.ಭಾಸಿನ್ ಸುದ್ದಿಗಾರರೊಂದಿಗೆ ಮಾತನಾಡುತ್ತ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ