ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಇರಾನ್‌ಗೆ ಪೆಟ್ರೋಲ್ ಸಪ್ಲೈ ಇಲ್ಲ: ವಿಟೋಲ್ ಘೋಷಣೆ (US pressure | Iran | Vitol | London | Switzerland)
Bookmark and Share Feedback Print
 
ಅಮೆರಿಕದ ಒತ್ತಡ ಮತ್ತು ನಿರ್ಬಂಧದ ಹಿನ್ನೆಲೆಯಲ್ಲಿ ಇರಾನ್ ಜೊತೆ ಒಪ್ಪಂದವನ್ನು ನಿಲ್ಲಿಸಲಾಗಿದೆ ಎಂದು ವಿಶ್ವದ ಅತೀ ದೊಡ್ಡ ತೈಲ ಮಾರಾಟಗಾರ ಸಂಸ್ಥೆಯಾದ ವಿಟೋಲ್ ಸೋಮವಾರ ಘೋಷಿಸಿದೆ.

ಆ ನಿಟ್ಟಿನಲ್ಲಿ ವಿಟೋಲ್ ಮತ್ತು ಅದರ ಸಹವರ್ತಿ ಕಂಪನಿಗಳಾದ ಗ್ಲೆನ್‌ಕೋರ್ ಮತ್ತು ಟ್ರಾಫಿಗುರಾ ಕೂಡ ಇರಾನ್‌ಗೆ ಪೆಟ್ರೋಲ್ ನೀಡುವುದನ್ನು ನಿಲ್ಲಿಸಿರುವುದಾಗಿ ಫೈನಾಶ್ಷಿಯಲ್ ಟೈಮ್ಸ್ ವರದಿ ತಿಳಿಸಿದೆ.

ಹೌದು, ನಾವು ಇರಾನ್‌ಗೆ ಪೆಟ್ರೋಲ್ ನೀಡುವುದನ್ನು ನಿಲ್ಲಿಸಿರುವುದಾಗಿ ಫೈನಾಶ್ಷಿಯಲ್ ಟೈಮ್ಸ್‌ಗೆ ಖಚಿತಪಡಿಸಿರುವುದಾಗಿ ವಿಟೋಲ್ ವಕ್ತಾರ ಎಎಫ್‌ಪಿಗೆ ವಿವರಿಸಿದ್ದಾರೆ.

ಸ್ವಿಜರ್‌ಲ್ಯಾಂಡ್ ಮೂಲದ ಟ್ರಾಫಿಗುರಾ ಸಂಸ್ಥೆ ಮೂರು ತಿಂಗಳ ಹಿಂದೆಯೇ ತೈಲ ಸರಬರಾಜನ್ನು ನಿಲ್ಲಿಸಿತ್ತು ಎಂದು ವರದಿ ಹೇಳಿದೆ. ಇದೀಗ ಅಮೆರಿಕದ ನಿರ್ಬಂಧದ ಹಿನ್ನೆಲೆಯಲ್ಲಿ ಇರಾನ್ ಜೊತೆ ತೈಲ ವ್ಯವಹಾರ ಇಲ್ಲ ಎಂಬುದಾಗಿ ವಿಟೋಲ್ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ