ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮೈಕ್ರೋಸಾಫ್ಟ್‌ನಿಂದ ವೆಬ್ ಆಧರಿತ ಆಪರೇಟಿಂಗ್ ಸಿಸ್ಟಂ (Microsoft | Web-based OS | software | Windows Azure)
Bookmark and Share Feedback Print
 
ವಿಶ್ವದ ಅತಿ ದೊಡ್ಡ ಸಾಫ್ಟ್‌ವೇರ್ ತಯಾರಿಕಾ ಸಂಸ್ಥೆ ಮೈಕ್ರೋಸಾಫ್ಟ್ ತನ್ನ ನೆಟ್ ಆಧರಿತ ಆಪರೇಟಿಂಗ್ ಸಿಸ್ಟಂನ್ನು ಭಾರತೀಯ ಬಳಕೆದಾರರಿಗೆ ಬಿಡುಗಡೆ ಮಾಡಿದೆ.

'ವಿಂಡೋಸ್ ಅಜ್ಯೂರ್' ಎಂದು ಹೆಸರಿಸಲಾಗಿರುವ ಕ್ಲೌಡ್ ಬೇಸ್ಡ್ ಆಪರೇಟಿಂಗ್ ಸಿಸ್ಟಂ ಮೈಕ್ರೋಸಾಫ್ಟ್ ಡಾಟಾ ಕೇಂದ್ರಗಳಲ್ಲಿ ಲಭ್ಯವಿರುತ್ತದೆ. ಇಲ್ಲಿ 0.12 ಡಾಲರುಗಳನ್ನು ನೀಡಿ ಗಂಟೆಯ ಆಧಾರದಲ್ಲಿ ಬಳಸಬಹುದು. ತಿಂಗಳಿಗೆ ಒಂದು ಜಿಬಿಗಾಗಿ 0.15 ಡಾಲರುಗಳನ್ನು ಅಜ್ಯೂರ್ ವಿಧಿಸುತ್ತದೆ.

ಎಸ್‌ಕ್ಯೂಎಲ್ ಅಜ್ಯೂರ್‌ನ ವೆಬ್ ಆವೃತ್ತಿ ಪ್ರತೀ 1 ಜಿಬಿಗೆ 10 ಜಾಲರಿನಂತೆ ಲಭ್ಯವಿದೆ. ಇದರ ವಾಣಿಜ್ಯ ಆವೃತ್ತಿಗೆ ಪ್ರತೀ ತಿಂಗಳಿಗೆ 10 ಜಿಬಿಗೆ 100 ಡಾಲರುಗಳನ್ನು ವಿಧಿಸಲಾಗುತ್ತದೆ ಎಂದು ಸಂಸ್ಥೆ ತಿಳಿಸಿದೆ.

ನಮ್ಮ ಎಲ್ಲಾ ಉತ್ಪನ್ನಗಳು ಕ್ಲೌಡ್-ರೆಡಿಯಾಗಿದ್ದು, ಕಂಪ್ಯೂಟರ್, ಮೊಬೈಲ್ ಮತ್ತು ಇಂಟರ್ನೆಟ್ ವಿಭಾಗಗಳಲ್ಲಿ ಯಾವ ಕ್ಷಣದಲ್ಲಿ, ಎಲ್ಲಿ ಬೇಕಾದರೂ ಸೇವೆಗಳನ್ನು ನೀಡುವ ಗುರಿ ಇಟ್ಟುಕೊಂಡಿದ್ದೇವೆ ಎಂದು ಮೈಕ್ರೋಸಾಫ್ಟ್ ಇಂಡಿಯಾ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ರಾಜನ್ ಆನಂದನ್ ತಿಳಿಸಿದ್ದಾರೆ.

ಕ್ಲೌಡ್ ವಿಧಾನದಲ್ಲಿ ಕಂಪನಿಯು ಭಾರತದಲ್ಲಿ 3,000ಕ್ಕಿಂತಲೂ ಹೆಚ್ಚು ಅಪ್ಲಿಕೇಷನ್‌ಗಳನ್ನು ಅಭಿವೃದ್ಧಿಪಡಿಸಿದೆ. ಈಗಾಗಲೇ ಸಂಸ್ಥೆಯು ಭಾರತದಲ್ಲಿ 250 ಚಿಕ್ಕ ಹಾಗೂ ಮಧ್ಯಮ ವರ್ಗದ ಗ್ರಾಹಕರನ್ನು ಹೊಂದಿದೆ. ಅಲ್ಲದೆ ಅಜ್ಯೂರ್‌ಗೆ ಹೊಂದಿಕೆಯಾಗುವ ಸಾಫ್ಟ್‌ವೇರ್‌ಗಳನ್ನು ಭಾರತದಲ್ಲಿ ಸುಮಾರು 22,000 ಮಂದಿ ಅಭಿವೃದ್ಧಿಪಡಿಸುವ ಯತ್ನ ನಡೆಸುತ್ತಿದ್ದಾರೆ ಎಂದು ಅವರು ತಿಳಿಸಿದ್ದಾರೆ.

ಇನ್ಫೋಸಿಸ್, ಎಚ್‌ಸಿಎಲ್ ಟೆಕ್ನಾಲಜೀಸ್, ಪೆರ್ಸಿಸ್ಟೆಂಟ್ ಸಾಫ್ಟ್‌ವೇರ್, ವಿಂಗ್ಸ್ ಇನ್ಫಾರ್ಮೇಷನ್, ಕೆರೆಬ್ರೇಟ್ ಮತ್ತು ಸಿಡಿಸಿ ಸಾಫ್ಟ್‌ವೇರ್ ಮುಂತಾದ ಸಂಸ್ಥೆಗಳು ಅಜ್ಯೂರ್ ಆಪರೇಟಿಂಗ್ ಸಿಸ್ಟಂಗೆ ಹೊಂದಿಕೆಯಾಗುವ ಸಾಫ್ಟ್‌ವೇರ್ ಅಭಿವೃದ್ಧಿಪಡಿಸುತ್ತಿವೆ ಎಂದೂ ರಾಜನ್ ಮಾಹಿತಿ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ