ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರ್ ಇಂಡಿಯಾಕ್ಕೆ 5,400 ಕೋಟಿ ನಷ್ಟವಾಗಲಿದೆ: ಪಟೇಲ್ (Air India | Praful Patel | National carrier | civil aviation minister)
Bookmark and Share Feedback Print
 
ಪ್ರಸಕ್ತ ಆರ್ಥಿಕ ವರ್ಷದಲ್ಲಿ ರಾಷ್ಟ್ರೀಯ ವಿಮಾನಯಾನ ಸಂಸ್ಥೆ 'ಏರ್ ಇಂಡಿಯಾ'ವು 5,400 ಕೋಟಿ ರೂಪಾಯಿಗಳಷ್ಟು ನಷ್ಟ ಅನುಭವಿಸಲಿದೆ ಮತ್ತು ಮುಂದಿನ ಕೆಲವು ವರ್ಷಗಳ ಕಾಲ ಇದೇ ಪರಿಸ್ಥಿತಿ ಮುಂದುವರಿಯಬಹುದು ಎಂದು ಕೇಂದ್ರ ನಾಗರಿಕ ವಾಯುಯಾನ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.

ನಷ್ಟ ಮುಂದಿನ ಒಂದೆರಡು ವರ್ಷಗಳ ಕಾಲ ಮುಂದುವರಿಯಬಹುದು ಎಂದು ರಾಜ್ಯಸಭೆಗೆ ಪಟೇಲ್ ತಿಳಿಸಿದರು. ವಿಮಾನಯಾನ ಸಂಸ್ಥೆಯು ಯಾವಾಗ ತನ್ನ ಗಳಿಕೆ ಆರಂಭಿಸಲಿದೆ ಎಂಬುದನ್ನು ಅವರು ತಿಳಿಸಿಲ್ಲ.

2009-10ರ ಸಾಲಿನಲ್ಲಿ ಏರ್ ಇಂಡಿಯಾವು 5,400 ಕೋಟಿ ರೂಪಾಯಿಗಳ ನಷ್ಟ ಅನುಭವಿಸುವ ಸಾಧ್ಯತೆಯಿದೆ. ಇದರೊಂದಿಗೆ ಸತತ ಮೂರು ವರ್ಷಗಳಲ್ಲಿ ನಷ್ಟ ಮುಂದುವರಿಯಲಿದ್ದು, ಒಟ್ಟು ನಷ್ಟದ ಮೊತ್ತ 13,174 ಕೋಟಿ ರೂಪಾಯಿಗಳನ್ನು ತಲುಪಬಹುದು. ಏರ್ ಇಂಡಿಯಾವು 2008-08ರ ಅವಧಿಯಲ್ಲಿ 2,226.16 ಕೋಟಿ ಹಾಗೂ 2008-09ರಲ್ಲಿ 5,548 ಕೋಟಿ ರೂಪಾಯಿಗಳ ನಷ್ಟ ಅನುಭವಿಸಿತ್ತು.

ವಿಮಾನಯಾನ ಸಂಸ್ಥೆಯು ತನ್ನ ಪುನಶ್ಚೇತನದ ಅಂಗವಾಗಿ ಹಲವು ಬದಲಾವಣೆಗಳನ್ನು ಮಾಡಿದೆ. ವಿಮಾನಗಳತ್ತ ಗಮನ, ನೌಕರಿ ಕಡಿತ, ಮಾರ್ಗಗಳನ್ನು ಲಾಭಮಯವನ್ನಾಗಿಸುವುದು ಮತ್ತು ಕಾರ್ಯನೀತಿಯಲ್ಲಿ ಬದಲಾವಣೆ ಸೇರಿದಂತೆ ಹಲವು ಯೋಜನೆಗಳನ್ನು ಹಮ್ಮಿಕೊಂಡಿರುವ ಪರಿಣಾಮ ಈ ವರ್ಷ 1911 ಕೋಟಿ ರೂಪಾಯಿಗಳಷ್ಟು ಲಾಭವನ್ನು ನಿರೀಕ್ಷಿಸಲಾಗುತ್ತಿದೆ ಎಂದು ಪಟೇಲ್ ವಿವರಣೆ ನೀಡಿದ್ದಾರೆ.

ಏರ್ ಇಂಡಿಯಾ ತೆಗೆದುಕೊಂಡಿರುವ ಈ ನಿರ್ಧಾರದಿಂದಾಗಿ ಪ್ರಸಕ್ತ ವರ್ಷ ಹೆಚ್ಚಿನ ಲಾಭವಾಗಲಿದೆಯಾದರೂ, 2010-11ರ ಸಾಲಿನಲ್ಲಿ ಕೇವಲ 753 ಕೋಟಿ ರೂಪಾಯಿಗಳನ್ನು ಮಾತ್ರ ಉಳಿಸಲು ಸಾಧ್ಯವಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಈ ವರ್ಷದ ಜನವರಿಯವರೆಗೆ ಏರ್ ಇಂಡಿಯಾವು 1741 ಕೋಟಿ ರೂಪಾಯಿಗಳಷ್ಟು ಇಂಧನ ದರ ಪಾವತಿಯನ್ನು ಉಳಿಸಿಕೊಂಡಿದೆ. ಬಾಕಿಯನ್ನು ತ್ವರಿತವಾಗಿ ಪಾವತಿಸುವಂತೆ ನಾವು ವಿಮಾನಯಾನ ಸಂಸ್ಥೆಗೆ ಸೂಚಿಸಿದ್ದೇವೆ ಎಂದರು.
ಸಂಬಂಧಿತ ಮಾಹಿತಿ ಹುಡುಕಿ