ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರತಿ ಹಳ್ಳಿಗೂ ಟೆಲಿಕಾಂ, ಬ್ರಾಡ್‌ಬ್ಯಾಂಡ್ ಸೇವೆ: ಪೈಲಟ್ (Broadband | Sachin Pilot | India | telecom | Bangladesh)
Bookmark and Share Feedback Print
 
ದೇಶದ ಹಳ್ಳಿ, ಹಳ್ಳಿಗಳಿಗೂ ಸೇವೆ ನೀಡುವ ಸಂಕಲ್ಪ ತೊಟ್ಟಿರುವ ಟೆಲಿಕಾಂ ಸಂಸ್ಥೆ, ಹಿಂದುಳಿದ ಗ್ರಾಮೀಣ ಪ್ರದೇಶಗಳಲ್ಲಿಯೂ ಟೆಲಿಕಾಂ ಮತ್ತು ಬ್ರಾಡ್‌ಬ್ಯಾಂಡ್ ಸೇವೆ ನೀಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಆ ನಿಟ್ಟಿನಲ್ಲಿ 626,000 ಹಳ್ಳಿಗಳು ಈ ಪ್ರಯೋಜನ ಪಡೆಯಲಿದೆ ಎಂದು ಕೇಂದ್ರದ ಮಾಹಿತಿ ತಂತ್ರಜ್ಞಾನ ಮತ್ತು ಸಂವಹನ ಖಾತೆ ರಾಜ್ಯ ಸಚಿವ ಸಚಿನ್ ಪೈಲಟ್ ತಿಳಿಸಿದ್ದಾರೆ.

ಈ ಮಹತ್ವದ ಯೋಜನೆ ಅನುಷ್ಠಾನಗೊಳಿಸಲು ಈಗಾಗಲೇ ಉಳಿದಿರುವ 3.5ಬಿಲಿಯನ್ ಡಾಲರ್ ಹಣವನ್ನು ಇದಕ್ಕಾಗಿ ಉಪಯೋಗಿಸಲಾಗುವುದು ಎಂದರು. ಅಲ್ಲದೇ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಗಡಿಭಾಗದಲ್ಲಿರುವ ಹಲವು ಹಳ್ಳಿಗಳಿಗೆ ಸುಮಾರು 11ಸಾವಿರ ಸಂಪರ್ಕ್ ಟವರ್‌ಗಳನ್ನು ನಿರ್ಮಿಸವುದಾಗಿ ಈ ಸಂದರ್ಭದಲ್ಲಿ ಹೇಳಿದರು.

500ಕ್ಕಿಂತ ಕಡಿಮೆ ಜನಸಂಖ್ಯೆ ಇಲ್ಲದ ಹಾಗೂ ಕೆಲವು ಪ್ರದೇಶಗಳಲ್ಲಿ 200ಜನಸಂಖ್ಯೆ ಹೊಂದಿರುವ ಗ್ರಾಮಗಳಲ್ಲಿಯೂ ಟವರ್ಸ್ ಅನ್ನು ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ ನಿರ್ಮಿಸಲಿದೆ ಎಂದರು.

ಅದೇ ರೀತಿ ಬುಡಕಟ್ಟು ಪ್ರದೇಶ ಹೊಂದಿರುವ ನಾಗಲ್ಯಾಂಡ್, ತ್ರಿಪುರಾ, ಮಿಜೋರಾಂ ಮತ್ತು ಅಸ್ಸಾಂಗಳಲ್ಲಿಯೂ ಟವರ್ಸ್ ನಿರ್ಮಿಸಲು ಸರ್ಕಾರ ಪ್ರಮುಖ ಗುರಿ ಹೊಂದಿದೆ. ಆದರೆ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ನೀಡಲು ಖಾಸಗಿ ಸಂಸ್ಥೆಗಳು ವಿರೋಧ ವ್ಯಕ್ತಪಡಿಸಿರುವ ಪರಿಣಾಮ ಸರ್ಕಾರವೇ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ನೀಡಲು ಮುಂದಾಗಿದೆ ಎಂದು ವಿವರಿಸಿದರು.
ಸಂಬಂಧಿತ ಮಾಹಿತಿ ಹುಡುಕಿ