ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ರಿಟನ್‌ನ ಕಂಪಾಸ್ ಬಿಪಿಓ ಆದಿತ್ಯ ಬಿರ್ಲಾ ತೆಕ್ಕೆಗೆ (Aditya Birla | Compass BPO | UAE | India)
Bookmark and Share Feedback Print
 
ಭಾರತದ ಪ್ರತಿಷ್ಠಿತ ಬಿಪಿಓ ಸರ್ವಿಸ್ ಸಂಸ್ಥೆಯಾದ ಆದಿತ್ಯ ಬಿರ್ಲಾ ಮಿನಾಕ್ಸ್ ಇದೀಗ ಬ್ರಿಟನ್ ಮೂಲದ ಕಂಪಾಸ್ ಬಿಪಿಓ ಕಂಪನಿಯನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ ಎಂದು ಹೇಳಿದೆ.

ಬ್ರಿಟನ್ ಮೂಲದ ಕಂಪನಿಯನ್ನು ಎಷ್ಟು ಮೊತ್ತಕ್ಕೆ ಖರೀದಿಸಲಾಯಿತು ಎಂಬ ಗುಟ್ಟನ್ನು ಮಾತ್ರ ಕಂಪನಿ ಬಿಟ್ಟುಕೊಟ್ಟಿಲ್ಲ. ಕಂಪಾಸ್ ಬಿಪಿಓ ಕಂಪನಿ ಪ್ರಮುಖವಾಗಿ ಫೈನಾನ್ಸ್ ಮತ್ತು ಅಕೌಂಟಿಂಗ್(ಎಫ್‌ಎಓ)ವಿಭಾಗದಲ್ಲಿ ಪ್ರಮುಖ ಸೇವೆಯನ್ನು ಒದಗಿಸುತ್ತಿದೆ.

ಕಂಪಾಸ್ ಕಂಪನಿ ಯುಕೆ, ಅಮೆರಿಕ, ಯುಎಇ ಮತ್ತು ಭಾರತಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಒಟ್ಟು 600ಮಂದಿ ನೌಕರರು ಕಂಪನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ಕಂಪಾಸ್ ಕಂಪನಿಯನ್ನು ತಮ್ಮ ವಶಕ್ಕೆ ತೆಗೆದುಕೊಳ್ಳುವ ಮೂಲಕ ಆಹಾರ ಮತ್ತು ಪಾನೀಯ ಕ್ಷೇತ್ರಗಳಲ್ಲಿ ಇನ್ನಷ್ಟು ಹೆಚ್ಚಿನ ಸಹಾಯಕವಾಗಲಿದೆ ಎಂದು ಆದಿತ್ಯ ಬಿರ್ಲಾ ಮಿನಾಕ್ಸ್ ಸಿಇಓ ದೀಪಕ್ ಪಟೇಲ್ ತಿಳಿಸಿದ್ದಾರೆ.

ಕಂಪಾಸ್ ಬಿಪಿಓ ಕಂಪನಿ ಕಳೆದ 11ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು, ಆರ್ಥಿಕವಾಗಿಯೂ ಸುಸ್ಥಿತಿಯಲ್ಲಿದೆ. ಆ ನಿಟ್ಟಿನಲ್ಲಿ ಕಂಪೆನಿಯ ಸ್ಥಾಪಕರಾದ ಡೇವಿಡ್ ಮೆಕ್‌ಕುಲ್ಲಾಗ್ ಮತ್ತು ಮಾರ್ಕ್ ಅಟ್‌ಕಿನ್ಸ್ ಅವರು ಮಿನಾಕ್ಸ್ ಆಡಳಿತ ಮಂಡಳಿಯಲ್ಲಿ ಇರುತ್ತಾರೆ ಎಂದು ದೀಪಕ್ ಸ್ಪಷ್ಟಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ