ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಕಂಪನಿಗಳು 10 ಲಕ್ಷ ನೇಮಕಾತಿಗೆ ಸಿದ್ಧವಾಗುತ್ತಿವೆ! (Jobs | organised sector | India | Ma Foi)
Bookmark and Share Feedback Print
 
ಪ್ರಸಕ್ತ ಆರ್ಥಿಕ ವರ್ಷದಲ್ಲಿ ಉದ್ಯೋಗ ಕ್ಷೇತ್ರ ತೀವ್ರ ಬಳಲಿಕೆ ಕಂಡದ್ದು ಹೌದಾದರೂ, ಮುಂದಿನ ಅವಧಿಯಲ್ಲಿ ಇದನ್ನು ಸರಿಪಡಿಸಿಕೊಳ್ಳುವ ಭರವಸೆ ಭಾರತದ ಸಂಘಟಿತ ಕ್ಷೇತ್ರದಲ್ಲಿ ಕಂಡು ಬಂದಿದೆ. ಸಮೀಕ್ಷೆಯೊಂದರ ಪ್ರಕಾರ 2010-11ರ ಅವಧಿಯಲ್ಲಿ ಸರಿಸುಮಾರು 10 ಲಕ್ಷ ಉದ್ಯೋಗಿಗಳನ್ನು ಕಂಪನಿಗಳು ನೇಮಕ ಮಾಡಿಕೊಳ್ಳಲಿವೆ.

'ಮಾ ಫೋಯ್' ಎಂಬ ಸಂಸ್ಥೆ ನಡೆಸಿರುವ ಔದ್ಯೋಗಿಕ ಸಮೀಕ್ಷೆಯ ಪ್ರಕಾರ ಮುಂದಿನ ಆರ್ಥಿಕ ವರ್ಷದಲ್ಲಿ ಭರಪೂರ ಅವಕಾಶಗಳು ತೆರೆದುಕೊಳ್ಳಲವೆ. ಆದರೆ ಉದ್ಯೋಗದಾತರು ಈ ಬಗ್ಗೆ ಭಾರೀ ಭರವಸೆಗಳನ್ನೆಲ್ಲ ನೀಡುತ್ತಿಲ್ಲ. ಕಾದು ನೋಡುವ ತಂತ್ರದಲ್ಲಿರುವ ಅವರು ಮುಂದಿನ ನಾಲ್ಕು ತಿಂಗಳುಗಳ ಕಾಲ ಎಚ್ಚರಿಕೆಯ ಹೆಜ್ಜೆಯನ್ನಿಡಲಿದ್ದು, ನಂತರದ ಅವಧಿಯ ಬಗ್ಗೆ ಆಶಾವಾದ ಹೊಂದಿದ್ದಾರೆ.

ಈ ಕುರಿತು ಹೆಚ್ಚು ಸಕಾರಾತ್ಮಕ ಪ್ರತಿಕ್ರಿಯೆಗಳು ಲಭಿಸಿರುವುದು ಅಹಮದಾಬಾದ್ ಮತ್ತು ಪುಣೆಗಳಂತಹ ಸಣ್ಣ ನಗರಗಳಿಂದ. ಮೆಟ್ರೋ ನಗರಗಳಲ್ಲಿ ಚೆನ್ನೈಯೇ ವಾಸಿ. ಉಳಿದಂತೆ ಬೆಂಗಳೂರು ಮತ್ತು ಕೊಲ್ಕತ್ತಾಗಳು ಅತ್ಯುತ್ತಮ ಪ್ರತಿಕ್ರಿಯೆ ಪಡೆದುಕೊಂಡಿವೆ. ಮುಂಬೈ ಮತ್ತು ದೆಹಲಿಗಳು ಆರ್ಥಿಕ ಹಿಂಜರಿತದಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ ಎಂಬ ಸೂಚನೆಗಳನ್ನು ನೀಡಿವೆ.

ಬ್ಯಾಂಕಿಂಗ್, ಆರ್ಥಿಕ ಸೇವೆಗಳು ಮತ್ತು ವಿಮಾ ವಲಯ, ಶೈಕ್ಷಣಿಕ ಕ್ಷೇತ್ರ, ಇಂಧನ, ಆರೋಗ್ಯ, ಉಪಚಾರ ಮತ್ತು ಪ್ರವಾಸೋದ್ಯಮ, ಮಾಹಿತಿ ತಂತ್ರಜ್ಞಾನ, ಐಟಿಇಎಸ್, ರಿಯಲ್ ಎಸ್ಟೇಟ್ ಮತ್ತು ನಿರ್ಮಾಣ ಕ್ಷೇತ್ರ, ಉದ್ಯಮ, ಸಾರಿಗೆ ಮತ್ತು ಉತ್ಪಾದನಾ ಕ್ಷೇತ್ರ ಸೇರಿದಂತೆ ದೇಶದ 11 ಕೈಗಾರಿಕಾ ವಲಯಗಳ 1000ಕ್ಕೂ ಹೆಚ್ಚು ಕಂಪನಿಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದ್ದು, ಮುಂದಿನ ಮೂರು ತಿಂಗಳು ಹಾಗೂ ವರ್ಷದ ಅವಧಿಯಲ್ಲಿ ಎಷ್ಟು ನೇಮಕಾತಿಗಳನ್ನು ಮಾಡಿಕೊಳ್ಳಲಿದ್ದೀರಿ ಎಂಬ ರೀತಿಯ ಯೋಜನೆಗಳನ್ನು ಕುರಿತು ಪ್ರಶ್ನಿಸಲಾಗಿತ್ತು.

ಫಾರ್ಮಾ, ಆರೋಗ್ಯ ಸಂಬಂಧಿ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ 68,000, ಬ್ಯಾಂಕಿಂಗ್, ಹಣಕಾಸು ಸೇವೆಗಳು ಮತ್ತು ವಿಮಾ ಕ್ಷೇತ್ರದಲ್ಲಿ 46,000, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ 97,000, ಆರೋಗ್ಯ ಕ್ಷೇತ್ರದಲ್ಲಿ 2,95,000, ಪ್ರವಾಸೋದ್ಯಮದಲ್ಲಿ 1,37,000 ಹಾಗೂ ರಿಯಲ್ ಎಸ್ಟೇಟ್‌ ಕ್ಷೇತ್ರದಲ್ಲಿ 1,36,000 ಹೊಸ ಉದ್ಯೋಗಗಳು ಸೃಷ್ಟಿಯಾಗಲಿದೆ ಎಂದು ಹೇಳಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ