ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸಿಗರೇಟು ಉತ್ಪಾದನೆ ವಿದೇಶಿ ನೇರ ಹೂಡಿಕೆ ನಿಷೇಧ ಸಾಧ್ಯತೆ (India Govt | FDI | cigarette making | cabinet)
Bookmark and Share Feedback Print
 
ಸಿಗರೇಟು ಉತ್ಪಾದನೆ ಮೇಲಿನ ವಿದೇಶಿ ನೇರ ಹೂಡಿಕೆ (ಎಫ್‌ಡಿಐ)ಯನ್ನು ನಿಷೇಧ ಮಾಡಲು ಸರಕಾರ ಸಿದ್ಧವಾಗಿದೆ. ಈ ಸಂಬಂಧ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯವು ಸಿದ್ಧಪಡಿಸಿರುವ ಪ್ರಸ್ತಾವಿತ ಟಿಪ್ಪಣಿಯನ್ನು ಆರ್ಥಿಕ ವ್ಯವಹಾರಗಳ ಸಚಿವಾಲಯವು ಇತರ ಸಚಿವಾಲಯಗಳಿಗೆ ಹಂಚಿದ್ದು, ಶೀಘ್ರದಲ್ಲೇ ಈ ಕುರಿತ ಅಧಿಕೃತ ನಿರ್ಧಾರ ಹೊರ ಬೀಳುವ ಸಾಧ್ಯತೆಗಳಿವೆ.

ಸಿಗರೇಟು ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆಯನ್ನು ನಿಷೇಧ ಮಾಡಿರುವುದರಿಂದ ಪ್ರಸಕ್ತ ದೇಶದಲ್ಲಿರುವ ವಿದೇಶಿ ಕಂಪನಿಗಳ ಮುಂದಿನ ಹೂಡಿಕೆಯ ಯೋಜನೆಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಆದರೆ ಆ ಕಂಪನಿಗಳ ಪ್ರಸಕ್ತ ಹೂಡಿಕೆಗಳಿಗೆ ಇದರಿಂದ ಯಾವುದೇ ಹೊಡೆತ ಬೀಳುವುದಿಲ್ಲ.

ಪ್ರಸಕ್ತ ಜಾಗತಿಕ ಸಂಸ್ಥೆಗಳಾದ ಬ್ರಿಟೀಶ್ ಅಮೆರಿಕನ್ ಟೊಬ್ಯಾಕೋ, ಜಪಾನ್ ಟೊಬ್ಯಾಕೋ ಮತ್ತು ಅಲ್ಟ್ರಿಯಾ ಗ್ರೂಪ್ ಎಂಬ ಮೂರು ಕಂಪನಿಗಳು ಭಾರತದಲ್ಲಿ ಬೃಹತ್ ಹೂಡಿಕೆಯನ್ನು ಮಾಡಿವೆ.

ದೇಶೀಯ ಬಳಕೆಗಾಗಿ ವಿದೇಶಿ ಕಂಪನಿಗಳು ಫ್ರಾಂಚೈಸಿ ನಿರ್ವಹಣೆ ಮಾಡುವುದನ್ನೂ ನಿಷೇಧಿಸುವ ಪ್ರಸ್ತಾಪ ಕ್ಯಾಬಿನೆಟ್ ಟಿಪ್ಪಣಿಯಲ್ಲಿದೆ. ವಿಶೇಷ ಆರ್ಥಿಕ ವಲಯಗಳ ರಫ್ತು ಕ್ಷೇತ್ರದಲ್ಲಿ ವಿದೇಶಿ ನೇರ ಹೂಡಿಕೆಗೆ ಅವಕಾಶ ನೀಡುವ ಪ್ರಸ್ತಾಪ ಇದರಲ್ಲಿದೆ ಎಂದು ಮೂಲಗಳು ಹೇಳಿವೆ.

ಈ ಟಿಪ್ಪಣಿಯ ಪ್ರಕಾರ ಸಿಗರೇಟು ಉತ್ಪಾದನೆಯಲ್ಲಿ ವಿದೇಶಿ ನೇರ ಹೂಡಿಕೆಯನ್ನು ನಿಷೇಧಿಸಲು ಎಲ್ಲಾ ಪ್ರಮುಖ ಸಚಿವಾಲಯಗಳು ತಮ್ಮ ಅಂಗೀಕಾರ ನೀಡಿವೆ. ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಫೆಬ್ರವರಿ 3ರಂದು ಕಳುಹಿಸಲಾಗಿದ್ದ ಈ ಪ್ರಸ್ತಾವನೆಗೆ ವಿತ್ತ ಸಚಿವಾಯಲವೂ ತನ್ನ ಒಪ್ಪಿಕೆ ನೀಡಿತ್ತು.

ವಿದೇಶಿ ನೇರ ಹೂಡಿಕೆಯ ನಿಷೇಧಿತ ಪಟ್ಟಿಗೆ ಸಿಗರೇಟನ್ನು ಸೇರಿಸುವಂತೆ ಸಲಹೆ ಮಾಡಿದ್ದ ಆರೋಗ್ಯ ಸಚಿವಾಲಯಕ್ಕೆ ಯೋಜನಾ ಆಯೋಗ ಕೂಡ ಬೆಂಬಲ ನೀಡಿದೆ. ಪ್ರಸಕ್ತ ಸರಕಾರದ ಪೂರ್ವಾನುಮತಿಯೊಂದಿಗೆ ಸಿಗರೇಟು ಉತ್ಪಾದನೆಯಲ್ಲಿ ಶೇ.100ರಷ್ಟು ವಿದೇಶಿ ನೇರ ಹೂಡಿಕೆಗೆ ಅವಕಾಶವಿದೆ.
ಸಂಬಂಧಿತ ಮಾಹಿತಿ ಹುಡುಕಿ