ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೆಚ್ಚಿನ ನಗರಗಳಲ್ಲಿ ಸಕ್ಕರೆ, ಧಾನ್ಯಗಳ ಬೆಲೆ ಇಳಿಕೆ: ಕೇಂದ್ರ (Sugar | pulse | essential items | Bangalore)
Bookmark and Share Feedback Print
 
ಮಾರ್ಚ್ ಮೂರಕ್ಕೆ ಕೊನೆಗೊಂಡ ವಾರದಲ್ಲಿ ದೇಶದ ಬಹುತೇಕ ಮಾರುಕಟ್ಟೆಗಳಲ್ಲಿ ಸಕ್ಕರೆ ಮತ್ತು ದ್ವಿದಳ ಧಾನ್ಯಗಳ ಬೆಲೆ ಇಳಿಕೆಯಾಗಿದೆ. ಇತರ ಅತ್ಯಗತ್ಯ ವಸ್ತುಗಳಾದ ಗೋಧಿ ಮತ್ತು ಖಾದ್ಯ ತೈಲಗಳ ಬೆಲೆ ಸ್ಥಿರವಾಗಿದೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ದೆಹಲಿ, ಜಮ್ಮು, ಡೆಹ್ರಾಡೂನ್, ಮುಂಬೈ, ಅಹಮದಾಬಾದ್, ರಾಯ್ಪುರ, ಜೈಪುರ, ಕೊಲ್ಕತ್ತಾ, ಭುವನೇಶ್ವರ ಮತ್ತು ಚೆನ್ನೈಗಳಲ್ಲಿನ ಮಾರುಕಟ್ಟೆಗಳಲ್ಲಿ ಸಕ್ಕರೆ ದರ ಕುಸಿತ ಕಂಡಿದೆ ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.

ಬೇಳೆ ಕಾಳುಗಳಲ್ಲಿ ತೊಗರಿ ಬೇಳೆ ದರ ದೆಹಲಿ, ಕೊಲ್ಕತ್ತಾ, ಚೆನ್ನೈ, ಬೆಂಗಳೂರು, ಭುವನೇಶ್ವರ ಮತ್ತು ಹೈದರಾಬಾದ್‌ಗಳಲ್ಲಿ ಕಡಿಮೆಯಾಗಿದೆ. ಉಳಿದಂತೆ ಕಡಲೆ ಬೇಳೆ, ಉದ್ದು ಮತ್ತು ಕೆಂಪು ತೊಗರಿ ಬೆಲೆಗಳು ಕೆಲವು ನಗರಗಳಲ್ಲಿ ಸ್ಥಿರವಾಗಿದೆ.

ಇದೇ ರೀತಿ ನಾವು ಪರಿಶೀಲನೆ ನಡೆಸಿದ ಅವಧಿಯಲ್ಲಿ ಗೋಧಿ, ಖಾದ್ಯ ತೈಲ, ವನಸ್ಪತಿ ಮತ್ತು ತರಕಾರಿಗಳಾದ ಆಲೂಗಡ್ಡೆ ಮತ್ತು ಈರುಳ್ಳಿ ದರಗಳು ಹೆಚ್ಚಿನ ನಗರಗಳಲ್ಲಿ ಸ್ಥಿರವಾಗಿದ್ದವು ಎಂದು ವರದಿ ಹೇಳಿದೆ.

ಗ್ರಾಹಕರ ವ್ಯವಹಾರಗಳ ಸಚಿವಾಲಯವು ಕ್ರೋಢೀಕರಿಸಿರುವ ಅಂಕಿ-ಅಂಶಗಳ ಪ್ರಕಾರ ಚಿಲ್ಲರೆ ಸಕ್ಕರೆ ಬೆಲೆ ಪ್ರತೀ ಕಿಲೋಗೆ 36ರಿಂದ 39 ರೂಪಾಯಿಗಳಲ್ಲಿ ಮಾರಾಟವಾಗಿದೆ. 2009ರ ಅಂತ್ಯದಲ್ಲಿ ಇದು 49 ರೂಪಾಯಿಗಳಲ್ಲಿತ್ತು.

ಅಗತ್ಯ ವಸ್ತುಗಳ ದರಗಳಲ್ಲಿ ತೀವ್ರ ಹೆಚ್ಚಳವಾದ ಹಿನ್ನೆಲೆಯಲ್ಲಿ ವಿರೋಧ ಪಕ್ಷಗಳು ಹಾಗೂ ಜನತೆಯಿಂದ ತೀವ್ರ ಪ್ರತಿರೋಧ ಎದುರಿಸುತ್ತಿರುವ ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರ, ಇದೀಗ ದರ ನಿಯಂತ್ರಣಕ್ಕೆ ಗಂಭೀರ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ