ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಬ್ರುಸೆಲ್ಸ್: ಟಾಟಾ ಮೋಟಾರ್ಸ್‌ಗೆ 340ಮಿ.ಪೌಂಡ್ ಸಾಲ (Tata | Jaguar | Land Rover | European Investment Bank | loan)
Bookmark and Share Feedback Print
 
ಟಾಟಾ ಮೋಟಾರ್ಸ್‌ನ ಜಾಗ್ವಾರ್ ಮತ್ತು ಲ್ಯಾಂಡ್ ರೋವರ್ ಬ್ರ್ಯಾಂಡ್‌ಗಾಗಿ 340ಮಿಲಿಯನ್ ಪೌಂಡ್(ಸುಮಾರು 510ಮಿಲಿಯನ್ ಡಾಲರ್) ಸಾಲವನ್ನು ನೀಡಲು ಒಪ್ಪಿರುವುದಾಗಿ ಯುರೋಪಿಯನ್ ಇನ್ವೆಸ್ಟ್‌ಮೆಂಟ್ ಬ್ಯಾಂಕ್ ಮಂಗಳವಾರ ತಿಳಿಸಿದೆ.

ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ನ ಭಾರ ಕಡಿಮೆ ಮತ್ತು ಕಡಿಮೆ ಇಂಧನ ಸಾಮರ್ಥ್ಯ ಹೆಚ್ಚಿಸುವ ಇಂಜಿನ್‌ ರಿಸರ್ಚ್‌ಗಾಗಿ ಈ ಸಾಲವನ್ನು ನೀಡುತ್ತಿರುವುದಾಗಿ ಬ್ಯಾಂಕ್ ತಿಳಿಸಿದೆ.

ಜಾಗ್ವಾರ್ ಮತ್ತು ಲ್ಯಾಂಡ್ ರೋವರ್‌ಗಾಗಿ ಸಾಲ ನೀಡುವಂತೆ ಟಾಟಾ ಮೋಟಾರ್ಸ್ ಕಂಪನಿ ಈ ಮೊದಲೇ ಮನವಿ ಸಲ್ಲಿಸಿತ್ತು. ಆ ನಿಟ್ಟಿನಲ್ಲಿ ಟಾಟಾಗೆ ಸಾಲ ಮಂಜೂರು ಮಾಡುವುದಾಗಿ ಹೇಳಿದೆ.

ಈ ಮೊದಲು ಯುರೋಪಿಯನ್ ಬ್ಯಾಂಕ್ ಟಾಟಾ ಮೋಟಾರ್ಸ್ ಕೇಳಿದ ಸಾಲದ ಮೊತ್ತವನ್ನು ಮಂಜೂರು ಮಾಡಲು ನಿರಾಕರಿಸಿತ್ತು. ಆ ಸಂದರ್ಭದಲ್ಲಿ ಟಾಟಾ ಮೋಟಾರ್ಸ್ ಕೂಡ, ಹೆಚ್ಚಿನ ಒತ್ತಡ ಹೇರಿಲ್ಲವಾಗಿತ್ತು. ಪೂರ್ಣ ಪ್ರಮಾಣದ ಸಾಲ ನೀಡುವುದಾದರೆ ಮಾತ್ರ ಮುಂದಿನ ಮಾತುಕತೆ ಎಂದಿತ್ತು. ಆ ನಿಟ್ಟಿನಲ್ಲಿ ಈಗ ಬ್ಯಾಂಕ್ ಸಾಲ ನೀಡುವುದಾಗಿ ಹೇಳಿದೆ.
ಸಂಬಂಧಿತ ಮಾಹಿತಿ ಹುಡುಕಿ