ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಫೋರ್ಬ್ಸ್: ವಿಶ್ವದ ಶ್ರೀಮಂತ ವ್ಯಕ್ತಿಗಳು-ಟಾಪ್‌ 10ನಲ್ಲಿ ಅಂಬಾನಿ-ಮಿತ್ತಲ್ (Bill Gates | Mexico | world's richest | Carlos Slim | Warren Buffett)
Bookmark and Share Feedback Print
 
ಮೆಕ್ಸಿಕೋದ ಟೆಲಿಕಾಂ ದಿಗ್ಗಜ ಕಾರ್ಲೋಸ್ ಸ್ಲಿಮ್ ಇದೀಗ ಮೈಕ್ರೋಸಾಫ್ಟ್‌ನ ಬಿಲ್ ಗೇಟ್ಸ್ ಮತ್ತು ವಾರ್ರೆನ್ ಬಫೆಟ್ಟ್ ಅವರನ್ನು ಹಿಂದಿಕ್ಕುವ ಮೂಲಕ ಅಭಿವೃದ್ಧಿ ಶೀಲ ದೇಶದ ವಿಶ್ವದ ಪ್ರಥಮ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆಂದು ಫೋರ್ಬ್ಸ್ ಮ್ಯಾಗಜೀನ್ ಸಮೀಕ್ಷೆ ತಿಳಿಸಿದೆ.

ನ್ಯೂಯಾರ್ಕ್ ಟೈಮ್ಸ್‌ನ ಪ್ರಮುಖ ಶೇರುದಾರರಗಾಗಿರುವ ಸ್ಲಿಮ್,ಸುಮಾರು 53.5ಬಿಲಿಯನ್ ಡಾಲರ್‌ನಷ್ಟು ಹಣ ಹೂಡಿದ್ದಾರೆ. ಪ್ರಸಕ್ತ ಬಿಲಿಯನೀಯರ್ ಸಮೀಕ್ಷೆಯ ಪಟ್ಟಿಯಲ್ಲಿ ಸ್ಲಿಮ್ ಪ್ರಥಮ ಸ್ಥಾನ ಪಡೆದಿರುವುದಾಗಿ ಫೋರ್ಬ್ಸ್ ವರದಿಗಾರ ಕೆರೆನ್ ಬ್ಲ್ಯಾಂಕ್‌ಪೆಲ್ಡ್ ತಿಳಿಸಿದ್ದಾರೆ. ವಲಸೆ ಬಂದ ಅಂಗಡಿ ಮಾಲೀಕನೊಬ್ಬನ ಪುತ್ರನಾಗಿರುವ ಸ್ಲಿಮ್ ಇಂದು 535ಶತಕೋಟಿ ಡಾಲರ್ ಒಡೆಯ!

ಅದೇ ರೀತಿ ಭಾರತದ ಮುಖೇಶ್ ಅಂಬಾನಿ ಮತ್ತು ಲಕ್ಷ್ಮಿ ಮಿತ್ತಲ್ ವಿಶ್ವದ ಹತ್ತು ಮಂದಿ ಶ್ರೀಮಂತರಲ್ಲಿ ಪ್ರಮುಖರಾಗಿದ್ದಾರೆ. ರಿಲಯನ್ಸ್ ಇಂಡಸ್ಟ್ರೀಸ್‌ನ ಮುಖ್ಯಸ್ಥ ಮುಖೇಶ್ ಅಂಬಾನಿ ನಾಲ್ಕನೆ ಸ್ಥಾನ ಪಡೆದಿದ್ದರೆ, ಸ್ಟೀಲ್ ಕ್ಷೇತ್ರದ ದಿಗ್ಗಜ ಮಿತ್ತಲ್ 5ನೇ ಸ್ಥಾನ ಪಡೆದಿದ್ದಾರೆ. ಇನ್ನುಳಿದಂತೆ ಫೋರ್ಬ್ಸ್ ಪಟ್ಟಿಯಲ್ಲಿ ಭಾರತದ ಹಲವು ಉದ್ಯಮಿಗಳು ಟಾಪ್ 50ಯಲ್ಲಿ ಸ್ಥಾನ ಪಡೆದಿದ್ದಾರೆ.

ಟೆಲ್‌ಮೆಕ್ಸ್ ಟೆಲಿಫೋನ್ ಕಂಪನಿಯ ದಿಗ್ಗಜ ಸ್ಲಿಮ್ ಅವರು ಫೋರ್ಬ್ಸ್ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಖುಷಿ ತಂದಿದೆ ಎಂದು ಸ್ಲಿಮ್ ಅವರ ಅಳಿಯ ಅರ್‌ಟುರೋ ಇಲಿಯಾಸ್ ಅಯೂಬ್ ಪ್ರತಿಕ್ರಿಯೆ ನೀಡಿದ್ದಾರೆ. ನಮ್ಮ ಕಂಪನಿ ಇನ್ನಷ್ಟು ಎತ್ತರಕ್ಕೆ ಬೆಳೆಯಲು ಮತ್ತು ಜನರಲ್ಲಿ ವಿಶ್ವಾಸ ಮೂಡಿಸಲು ಇದು ಸಹಕಾರಿ ಎಂದು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ