ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಪ್ರಸಕ್ತ ಸಾಲಿನಲ್ಲಿ 1,200 ನೌಕರರ ನೇಮಕ: ಟೊಯೋಟಾ (Toyota | 1,200 employees | FY 2010 | Japanese)
Bookmark and Share Feedback Print
 
ಪ್ರಸಕ್ತ ಸಾಲಿನಲ್ಲಿ 1,200ಮಂದಿ ನೌಕರರನ್ನು ನೇಮಕಾತಿ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಟೊಯೋಟಾ ಮೋಟಾರ್ ಕಂಪನಿ ತಿಳಿಸಿದ್ದು, ಆರ್ಥಿಕ ಸ್ಥಿತಿ ಅನಿಶ್ಚಿತತೆಯಲ್ಲಿ ಇರುವುದರಿಂದ ಕ್ಲರ್ಕ್ ಹುದ್ದೆಗೆ ನೇಮಕಾತಿ ಮಾಡಿಕೊಳ್ಳುತ್ತಿಲ್ಲ ಎಂದು ಸ್ಪಷ್ಟಪಡಿಸಿದೆ.

2009ರಲ್ಲಿ ಕ್ಲರ್ಕ್ ಸ್ಟಾಫ್ ಸೇರಿದಂತೆ ಒಟ್ಟು 1,376ನೌಕರರನ್ನು ನೇಮಕಾತಿ ಮಾಡಿಕೊಳ್ಳಲಾಗಿತ್ತು. ಆ ನಿಟ್ಟಿನಲ್ಲಿ 2010ರಲ್ಲಿ ನೇಮಕಾತಿಯಲ್ಲಿ ಶೇ.12ರಷ್ಟು ಕಡಿತಗೊಂಡಿದೆ ಎಂದು ಹೇಳಿದೆ.

ಜಾಗತಿಕ ಮಟ್ಟದಲ್ಲಿನ ಆರ್ಥಿಕ ಹೊಡೆತದಿಂದಾಗಿ ನೇಮಕಾತಿ ಪ್ರಕ್ರಿಯೆಯಲ್ಲಿ ಬಹಳಷ್ಟು ಕಡಿತ ಮಾಡುತ್ತಿರುವುದಾಗಿ ಟೊಯೋಟಾ ಕಂಪನಿ ತಿಳಿಸಿದ್ದು, ಏಪ್ರಿಲ್‌ನಿಂದ 1,200ನೌಕರರನ್ನು ನೇಮಕ ಮಾಡಿಕೊಳ್ಳಲು ಉದ್ದೇಶಿಸಲಾಗಿದೆ ಎಂದಿದೆ. ಪ್ರಸಕ್ತ ಆರ್ಥಿಕ ಸಾಲಿನಲ್ಲಿ ಕಂಪನಿ ಮತ್ತೆ ಲಾಭ ಗಳಿಸಲಿದೆ ಎಂಬ ವಿಶ್ವಾಸ ಹೊಂದಿರುವುದಾಗಿ ಜಪಾನ್ ಮೂಲದ ಟೊಯೋಟಾ ತಿಳಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಟೊಯೋಟಾ, ಜಪಾನ್ ಕಂಪನಿ, 2010