ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆಹಾರ ಹಣದುಬ್ಬರ ಶೇ.17.81ಕ್ಕೆ ಇಳಿಕೆ: ತೈಲ ಬೆಲೆ ಏರಿಕೆ (Food inflation | fuel prices rise | vegetable price | budget 2010)
Bookmark and Share Feedback Print
 
PTI
ವಾರ್ಷಿಕ ಆಹಾರ ಹಣದುಬ್ಬರ ದರ ಫೆಬ್ರುವರಿ 28ಕ್ಕೆ ಅಂತ್ಯಗೊಂಡಂತೆ ಶೇ.17.81ಕ್ಕೆ ಇಳಿಕೆ ಕಂಡಿದೆ. ಕಳೆದ ವಾರದ ಅವಧಿಯಲ್ಲಿ ಆಹಾರ ಹಣದುಬ್ಬರ ದರ ಶೇ.17.87ಕ್ಕೆ ಏರಿತ್ತು.

ಏತನ್ಮಧ್ಯೆ ಪ್ರಸಕ್ತ ಸಾಲಿನಲ್ಲಿ ಮಂಡಿಸಿದ್ದ ಬಜೆಟ್‌ನಲ್ಲಿ ತೆರಿಗೆ ಮತ್ತು ಆಮದು ಸುಂಕ ಹೆಚ್ಚಿಸಿರುವ ಪರಿಣಾಮ ತೈಲ ಬೆಲೆ ಏರಿಕೆ ಕಂಡಿದೆ. ಫೆಬ್ರುವರಿ ತಿಂಗಳಲ್ಲಿ ಅಂತ್ಯಗೊಂಡಂತೆ ಹಣದುಬ್ಬರ ಶೇ.0.06ಇಳಿಕೆ ಕಂಡಿದೆ. ಕಳೆದ ವಾರ ಆಹಾರ ಹಣದುಬ್ಬರ ಶೇ.17.87ಕ್ಕೆ ಏರಿತ್ತು.

ಆ ನಿಟ್ಟಿನಲ್ಲಿ ಕೆಲವು ಸಂದರ್ಭದಲ್ಲಿ ಸ್ವಲ್ಪ ಬೆಲೆ ಇಳಿಕೆ ಕಂಡರೂ ಕೂಡ ದಿನಬಳಕೆಯ ವಸ್ತುಗಳ ಬೆಲೆ ಏರಿಕೆ ಯಥಾಸ್ಥಿತಿಯಲ್ಲಿಯೇ ಮುಂದುವರಿದಿದೆ. ಆದರೆ ಏಪ್ರಿಲ್ ತಿಂಗಳಿನಿಂದ ಆಹಾರ ಬೆಲೆ ಇಳಿಕೆ ಕಾಣಲಿದೆ ಎಂಬುದು ಸರ್ಕಾರದ ವಿಶ್ವಾಸವಾಗಿದೆ.

ಆಹಾರ ಹಣದುಬ್ಬರದ ಪರಿಣಾಮ ಎಂಬಂತೆ ಬಟಾಟೆ ಬೆಲೆಯಲ್ಲಿ ಶೇ.22.46ರಷ್ಟು, ಈರುಳ್ಳಿ ಶೇ.2.98ರಷ್ಟು ಏರಿಕೆ ಕಂಡಿದೆ. ಉಳಿದಂತೆ ತರಕಾರಿ ಬೆಲೆಗಳು ಶೇ.15.61ರಷ್ಟು, ಹಾಲು ಶೇ.15.31 ಹಾಗೂ ಹಣ್ಣು-ಹಂಪಲು ಬೆಲೆ ಶೇ.11.77ರಷ್ಟು ಹೆಚ್ಚಳ ಕಂಡಿದೆ.
ಸಂಬಂಧಿತ ಮಾಹಿತಿ ಹುಡುಕಿ