ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಐಸ್‌ಲೆಂಡ್ ನಿರುದ್ಯೋಗ ಪ್ರಮಾಣದಲ್ಲಿ ಭಾರೀ ಕುಸಿತ (Iceland | unemployment | Labour Directorate | jobless rate)
Bookmark and Share Feedback Print
 
ಐಸ್‌ಲೆಂಡ್ ನಿರುದ್ಯೋಗ ಪ್ರಮಾಣ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಫೆಬ್ರವರಿಯಲ್ಲಿ ಶೇ.9.3ಕ್ಕೆ ತಲುಪಿದೆ ಎಂದು ಅಧಿಕೃತ ಮಾಹಿತಿಗಳು ವಿವರಣೆ ನೀಡಿವೆ.

ಬುಧವಾರ ಬಿಡುಗಡೆ ಮಾಡಲಾಗಿರುವ ಈ ವರದಿಯಲ್ಲಿ ದೇಶದ ನಿರುದ್ಯೋಗ ಪ್ರಮಾಣವು ಜನವರಿಯಲ್ಲಿದ್ದ ಶೇ.9ರಿಂದ ಫೆಬ್ರವರಿ ತಿಂಗಳಿಗೆ ಶೇ.9.3ಕ್ಕೆ ಏರಿಕೆಯಾಗಿದೆ ಎಂದು ತಿಳಿಸಲಾಗಿದೆ.

ಆದರೆ ಕಾರ್ಮಿಕರ ನಿರ್ದೇಶನಾಲಯದ ಪ್ರಕಾರ ನಿರುದ್ಯೋಗ ಪ್ರಮಾಣವು ಮಾರ್ಚ್‌ನಲ್ಲಿ ಶೇ.9.1ರಿಂದ ಶೇ.9.1ರ ನಡುವೆ ಇರಬಹುದು ಎಂದು ಅಂದಾಜಿಸಿದ್ದಾರೆ.

ಜಾಗತಿಕ ಸಾಲ ಕೂಪದಲ್ಲಿ ಸಿಲುಕಿದ್ದ ಐಸ್‌ಲೆಂಡ್‌ನ ಮೂರು ಪ್ರಮುಖ ಬ್ಯಾಂಕುಗಳು ಕುಸಿದ ನಂತರ ದೇಶದ ಸ್ಥಿತಿ ತೀವ್ರವಾಗಿ ಹದಗೆಟ್ಟಿತ್ತು. ಉತ್ತರ ಅಟ್ಲಾಂಟಿಕ್ ದೇಶವಾದ ಐಸ್‌ಲೆಂಡ್ 2008ರ ಅಕ್ಟೋಬರ್‌ನಲ್ಲಿ ಈ ಕುಸಿತವನ್ನು ಕಂಡಿತ್ತು. ಅದಕ್ಕೂ ಮೊದಲು ಇಲ್ಲಿನ ನಿರುದ್ಯೋಗ ಪ್ರಮಾಣ ಶೇ.2.0ಯಲ್ಲಿತ್ತು.

ತೀವ್ರ ಆರ್ಥಿಕ ಹಿನ್ನಡೆ ಕಂಡ ಬಳಿಕ ಸರಕಾರವು ಉದ್ಯೋಗ ವಲಯವನ್ನು ಬಲವಂತವಾಗಿ ನಿಯಂತ್ರಣಕ್ಕೆ ತೆಗೆದುಕೊಂಡಿತ್ತು. ಇದರಿಂದಾಗಿ ಐಸ್‌ಲೆಂಡಿನ ಹಲವರು ತಮ್ಮ ನೌಕರಿಗಳನ್ನೂ ಕಳೆದುಕೊಂಡಿದ್ದರು.
ಸಂಬಂಧಿತ ಮಾಹಿತಿ ಹುಡುಕಿ