ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗ್ಯಾಮನ್ ಇಂಡಿಯಾ ತೆಕ್ಕೆಗೆ 631ಕೋಟಿ ರೂ.ಗುತ್ತಿಗೆ (Gammon India | Delhi Tourism | Mumbai | river Yamuna,)
Bookmark and Share Feedback Print
 
ಸೇತುವೆ ನಿರ್ಮಾಣಕ್ಕಾಗಿ ದೆಹಲಿ ಪ್ರವಾಸೋದ್ಯಮ ಮತ್ತು ಸಾರಿಗೆ ಅಭಿವೃದ್ಧಿ ಕಾರ್ಪೋರೇಶನ್‌ನಿಂದ ಸುಮಾರು 631.81ಕೋಟಿ ರೂಪಾಯಿ ಗುತ್ತಿಗೆಯನ್ನು ಪಡೆದಿರುವುದಾಗಿ ಪ್ರತಿಷ್ಠಿತ ಗ್ಯಾಮನ್ ಇಂಡಿಯಾ ಕಂಪನಿ ತಿಳಿಸಿದೆ.

ಯುಮುನಾ ನದಿಯಿಂದ ದೆಹಲಿ ಸಂಪರ್ಕಿಸುವ ಬೃಹತ್ ಸೇತುವೆ ನಿರ್ಮಾಣದ ಕಾಮಗಾರಿ ಯೋಜನೆ ಗುತ್ತಿಗೆಯನ್ನು ಗ್ಯಾಮನ್ ಇಂಡಿಯಾ ಪಡೆದಿರುವುದಾಗಿ ನ್ಯಾಷನಲ್ ಸ್ಟಾಕ್ ಎಕ್ಸ್‌ಚೇಂಜ್‌ಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ.

ದೆಹಲಿ ವೇಗದಲ್ಲಿ ಬೆಳೆಯುತ್ತಿರುವ ನಗರವಾಗಿದ್ದು, ಈಗಾಗಲೇ 15ಮಿಲಿಯನ್ ಜನಸಂಖ್ಯೆಯನ್ನು ಹೊಂದಿದೆ. 2012ರಲ್ಲಿ 23ಮಿಲಿಯನ್ ಜನಸಂಖ್ಯೆ ಹೆಚ್ಚಳವಾಗುವ ಸಾಧ್ಯತೆ ಇದೆ ಎಂಬ ಲೆಕ್ಕಚಾರ ಹಾಕಲಾಗಿದೆ. ಆ ನಿಟ್ಟಿನಲ್ಲಿ ಸಂಚಾರ ವ್ಯವಸ್ಥೆ ಸುಗಮವಾಗುವ ನೆಲೆಯಲ್ಲಿ ರಸ್ತೆ ಮತ್ತು ಸೇತುವೆ ಕಾಮಗಾರಿಯನ್ನು ದೆಹಲಿ ಸರ್ಕಾರ ತ್ವರಿತಗತಿಯಲ್ಲಿ ಕೈಗೊಳ್ಳುತ್ತಿದೆ. ಗ್ಯಾಮನ್ ಇಂಡಿಯಾ ದೇಶದ ಪ್ರತಿಷ್ಠಿತ ಸಂಸ್ಥೆಯಾಗಿದ್ದು, ಯಮುನಾ ಗೀತಾ ಕಾಲೋನಿ ಸೇತುವೆ ಕಾಮಗಾರಿ ಯೋಜನೆಯನ್ನು ನೀಡಿದೆ.
ಸಂಬಂಧಿತ ಮಾಹಿತಿ ಹುಡುಕಿ