ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ರಿಲಯೆನ್ಸ್, ಟಾಟಾಗಳಿಂದ ಅಕ್ರಮ 3ಜಿ ಸೇವೆ; ವೊಡಾಫೋನ್ (Vodafone | 3G | Reliance Communications | Tata Teleservices)
Bookmark and Share Feedback Print
 
ರಿಲಯೆನ್ಸ್ ಕಮ್ಯೂನಿಕೇಷನ್ಸ್ ಮತ್ತು ಟಾಟಾ ಟೆಲಿಸರ್ವಿಸಸ್ ಮೊಬೈಲ್ ಸೇವಾದಾರ ಸಂಸ್ಥೆಗಳು ಈಗಾಗಲೇ 3ಜಿ ಸೇವೆಗಳನ್ನು ನೀಡುತ್ತಿವೆ ಎಂದು ಆರೋಪಿಸಿರುವ ವೊಡಾಫೋನ್ ಎಸ್ಸಾರ್ ಕಂಪನಿಯು, ಅವುಗಳ ಮೇಲೆ ಭಾರೀ ಪ್ರಮಾಣದ ದಂಡ ಹೇರಬೇಕೆಂದು ಆಗ್ರಹಿಸಿದೆ.

ಸಿಡಿಎಂಎ ಸೇವೆಯನ್ನು ನೀಡುತ್ತಿರುವ ಮೊಬೈಲ್ ಸೇವಾದಾರರು ತಮ್ಮ 2ಜಿ ಮತ್ತು 3ಜಿ ಸೇವೆಗಳನ್ನು ಒಂದೇ ತರಂಗಾತರದ ಮೂಲಕ ನೀಡುತ್ತಿದ್ದು, ಇದು ವೊಡಾಫೋನ್ ಕಿಡಿಗೆ ಕಾರಣ ಎಂದು ಹೇಳಲಾಗುತ್ತಿದೆ.

ರಿಲಯೆನ್ಸ್ ಮತ್ತು ಟಾಟಾ ಸಂಸ್ಥೆಗಳು 3ಜಿ ಸೇವೆಗಳನ್ನು ಒದಗಿಸುತ್ತಿದ್ದು, ತ್ವರಿತ ಗತಿಯ ಡಾಟಾ ಸೇವೆಗಳನ್ನು ನೀಡುತ್ತಿವೆ ಎಂದೂ ಜಿಎಸ್ಎಂ ಸೇವಾದಾರ ಸಂಸ್ಥೆಗಳು ಆರೋಪಿಸಿವೆ.

3ಜಿ ಸೇವೆಗಳನ್ನು ಒದಗಿಸುವ ಸಂಸ್ಥೆಗಳು ತರಂಗಾಂತರವನ್ನು ಪಡೆದುಕೊಳ್ಳಲು ಗರಿಷ್ಠ ಮೊತ್ತವನ್ನು ಪಾವತಿಸುವ ಅಗತ್ಯವಿದೆ. ಜಿಎಸ್ಎಂ ಸಂಸ್ಥೆಗಳು 3ಜಿ ತರಂಗಾಂತರಗಳನ್ನು ಪಡೆದುಕೊಳ್ಳಲು ಹರಾಜಿಗಾಗಿ ಕಾಯುತ್ತಿವೆ. ಮುಂದಿನ ತಿಂಗಳು ಹರಾಜು ನಡೆಯುವ ನಿರೀಕ್ಷೆಗಳಿವೆ.

ಅದೇ ಹೊತ್ತಿಗೆ 2ಜಿ ತರಂಗಾಂತರಗಳ ಬಳಕೆ ದರಗಳನ್ನು ಹೆಚ್ಚಿಸುವ ದೂರವಾಣಿ ಇಲಾಖೆಯ ನಿರ್ಧಾರವನ್ನು ಕೂಡ ವೊಡಾಫೋನ್ ಟೀಕಿಸಿದೆ.

ಅಧಿಕೃತವಾಗಿ 3ಜಿ ಸೇವೆಗಳು ಹರಾಜಾಗುವ ಮೊದಲೇ ತಮ್ಮ ತರಂಗಾಂತರಗಳ ಮೂಲಕ ಸಿಡಿಎಂಎ ಸಂಸ್ಥೆಗಳು ಅತ್ಯುತ್ತಮ ಸೇವೆಗಳನ್ನು ನೀಡುವ ಮೂಲಕ ಜಿಎಸ್ಎಂ ಸಂಸ್ಥೆಗಳು ಹರಾಜಿನಲ್ಲಿ ದುಬಾರಿ ಬೆಲೆ ತೆತ್ತು ನಷ್ಟ ಅನುಭವಿಸಬೇಕಾದೀತು ಎನ್ನುವುದು ವೊಡಾಫೋನ್ ಅಳಲು. ಈ ಬಗ್ಗೆ ದೂರವಾಣಿ ಇಲಾಖೆ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಕಾದು ನೋಡಬೇಕಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ