ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗುಮಾಸ್ತ ಹುದ್ದೆ ನೇಮಕಾತಿಯಿಲ್ಲ; ಜಪಾನ್ ಕಂಪನಿ ಸ್ಪಷ್ಟನೆ (Toyota | employees | FY 2010 | clerical staff)
Bookmark and Share Feedback Print
 
ಏಪ್ರಿಲ್‌ನಲ್ಲಿ ಆರಂಭವಾಗಲಿರುವ 2010ರ ಆರ್ಥಿಕ ವರ್ಷದಲ್ಲಿ ತಾನು 1,200 ಮಂದಿಯನ್ನು ನೇಮಕಾತಿ ಮಾಡಿಕೊಳ್ಳುವ ಯೋಜನೆ ಹೊಂದಿರುವುದಾಗಿ ಟೊಯೋಟಾ ಮೋಟಾರ್ ಕಾರ್ಪೊರೇಷನ್ ಹೇಳಿಕೊಂಡಿದೆ. ಆದರೆ ಅನಿರ್ದಿಷ್ಟ ಆರ್ಥಿಕ ಪರಿಸ್ಥಿತಿಗಳ ಕಾರಣದಿಂದ ಗುಮಾಸ್ತ ಹುದ್ದೆಗಳಿಗೆ ಸಿಬ್ಬಂದಿಗಳನ್ನು ಆಯ್ಕೆ ನಡೆಸುತ್ತಿಲ್ಲ ಎಂದು ತಿಳಿಸಿದೆ.

2009ರ ಆರ್ಥಿಕ ವರ್ಷದಲ್ಲಿ ಕ್ಲರ್ಕ್ ಸಿಬ್ಬಂದಿ ಸೇರಿದಂತೆ 1,376 ನೌಕರರನ್ನು ಸಂಸ್ಥೆಗೆ ನೇಮಕ ಮಾಡಿಕೊಂಡಿದ್ದ ಟೊಯೋಟಾ, ಈ ಬಾರಿ ನೇಮಕಾತಿಯಲ್ಲಿ ಶೇ.12ರ ಇಳಿಕೆಯನ್ನು ತನ್ನ ಯೋಜನೆಯಲ್ಲಿ ಪ್ರಕಟಿಸಿದೆ.

ಈ ಬಾರಿಯ ನೇಮಕಾತಿ ಯೋಜನೆಯು 1994ರ ಆರ್ಥಿಕ ವರ್ಷವನ್ನು ಹೋಲುತ್ತಿದ್ದು, ಭಾರೀ ಆರ್ಥಿಕ ನಷ್ಟದ ಹಿನ್ನೆಲೆಯಲ್ಲಿ ವರ್ಷದಿಂದ ವರ್ಷಕ್ಕೆ ನೇಮಕಾತಿಯನ್ನು ಕಡಿಮೆ ಮಾಡಿಕೊಂಡು ಬರಲಾಗುತ್ತಿದೆ.

ಕಳೆದ ವರ್ಷ ಭಾರೀ ನಷ್ಟ ಅನುಭವಿಸಿದ್ದ ಜಪಾನ್‌ನ ಬೃಹತ್ ಆಟೋ ಕಂಪನಿಯು ಪ್ರಸಕ್ತ ಮಾರ್ಚ್‌ನಲ್ಲಿ ಅಂತ್ಯವಾಗಲಿರುವ ಆರ್ಥಿಕ ವರ್ಷದಲ್ಲಿ ಲಾಭವನ್ನು ಎದುರು ನೋಡುತ್ತಿದೆ. ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ದೋಷಪೂರಿತ ವಾಹನಗಳನ್ನು ಮರಳಿ ಪಡೆದುಕೊಂಡ ನಡುವೆಯೂ, ಮಾರಾಟ ಕುಸಿಯತ್ತಿರುವ ಸಂದರ್ಭದಲ್ಲಿ ವೈಯಕ್ತಿಕ ನಷ್ಟಗಳನ್ನು ಕಡಿಮೆ ಮಾಡಿಕೊಳ್ಳಲು ಕಂಪನಿ ಯೋಜನೆ ರೂಪಿಸಿದೆ.

ಜಪಾನ್‌ನ ಬೃಹತ್ ಕಂಪನಿಗಳಲ್ಲೊಂದಾದ ಟೊಯೋಟಾ ಮಿತ ನೇಮಕಾತಿ ಯೋಜನೆಯನ್ನು ಹಮ್ಮಿಕೊಂಡಿರುವುದು ಇತರ ಕಂಪನಿಗಳ ಮೇಲೂ ಪರಿಣಾಮ ಬೀರಲಿದೆ ಎಂದು ಹೇಳಲಾಗುತ್ತಿದ್ದು, ದೇಶೀಯ ಔದ್ಯೋಗಿಕ ಮಾರುಕಟ್ಟೆಯಲ್ಲೂ ಭಾರೀ ನಿರಾಸೆ ಕಂಡು ಬಂದಿದೆ.

2009ರಲ್ಲಿ ಕಂಪನಿಯು ಯುನಿವರ್ಸಿಟಿಗಳಿಂದ ಎರಡು ವರ್ಷಗಳ ಪದವಿ ಪಡೆದ ಮತ್ತು ವೃತ್ತಿರ ಶಾಲಾ ಕೋರ್ಸ್‌ಗಳನ್ನು ಮಾಡಿ 143 ಕ್ಲರ್ಕ್ ಸಿಬ್ಬಂದಿಗಳನ್ನು ನೇಮಕ ಮಾಡಿಕೊಂಡಿತ್ತು.
ಸಂಬಂಧಿತ ಮಾಹಿತಿ ಹುಡುಕಿ