ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಚ್‌ಎಸ್‌ಬಿಸಿ ದಾಖಲೆ ಕಳ್ಳತನದಿಂದ ಗ್ರಾಹಕರಿಗೆ ತೊಂದರೆ (HSBC | Swiss branch | customers | Alexandre Zeller)
Bookmark and Share Feedback Print
 
ಎಚ್ಎಸ್‌ಬಿಸಿ ಖಾಸಗಿ ಬ್ಯಾಂಕಿನ ಸ್ವಿಜರ್ಲೆಂಡ್ ಶಾಖೆಯಲ್ಲಿ ಕಳೆದ ಮೂರು ವರ್ಷಗಳ ಹಿಂದೆ ದಾಖಲೆ ಕಳ್ಳತನ ಪರಿಣಾಮ 24,000 ಗ್ರಾಹಕರು ತೊಂದರೆಗೊಳಗಾಗಿದ್ದಾರೆ ಎಂದು ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಲೆಕ್ಸಾಂಡ್ರೆ ಜೆಲ್ಲರ್ ಗುರುವಾರ ತಿಳಿಸಿದ್ದಾರೆ.

ದಾಖಲೆ ಕಳ್ಳತನಕ್ಕೆ ಸಂಬಂಧಪಟ್ಟ 9,000 ಮಂದಿ ಈಗಾಗಲೇ ತಮ್ಮ ಬ್ಯಾಂಕುಗಳನ್ನು ಬದಲಾವಣೆ ಮಾಡಿದ್ದಾರೆ. ಉಳಿದ 15,000 ಮಂದಿ ಗ್ರಾಹಕರು ಈಗಲೂ ಇದೇ ಬ್ಯಾಂಕಿನಲ್ಲಿ ಉಳಿದುಕೊಂಡಿದ್ದಾರೆ ಎಂದು ಸ್ವಿಜರ್ಲೆಂಡ್‌ನ ಎಚ್ಎಸ್‌ಬಿಸಿ ಖಾಸಗಿ ಬ್ಯಾಂಕ್ ತಿಳಿಸಿದೆ.

ಈ ಸಂಬಂಧ ಹೇಳಿಕೆಯೊಂದನ್ನು ಬಿಡುಗಡೆ ಮಾಡಿರುವ ಬ್ಯಾಂಕ್, ದಾಖಲೆ ಕಳ್ಳತನ ಪ್ರಕರಣ ನಡೆದಿರುವುದಕ್ಕೆ ಕ್ಷಮೆ ಯಾಚಿಸಿದೆ. ಅಲ್ಲದೆ ಈ ಕಳ್ಳತನ ನಡೆಸಿ ರಹಸ್ಯ ಮಾಹಿತಿಗಳನ್ನು ಫ್ರೆಂಚ್ ತೆರಿಗೆ ಇಲಾಖೆಗೆ ಕಳೆದ ವರ್ಷ ನೀಡಿರುವುದು ಬ್ಯಾಂಕಿನ ಸಿಬ್ಬಂದಿ ಎಂಬ ವಿಚಾರ ತನಗೆ ಇತ್ತೀಚೆಗಷ್ಟೇ ತಿಳಿದು ಬಂತು ಎಂದಿದೆ.

ಮೂರು ವರ್ಷಗಳ ಹಿಂದೆ ಮಾಹಿತಿ ತಂತ್ರಜ್ಞಾನ ವಿಭಾಗದ ಸಿಬ್ಬಂದಿಯೊಬ್ಬ ಮಾಹಿತಿಗಳನ್ನು ಕಳ್ಳತನ ಮಾಡಿದ್ದ ಎಂಬುದು ಈಗ ಸ್ಪಷ್ಟವಾಗಿದೆ. 2006ರ ಅಕ್ಟೋಬರ್ ತಿಂಗಳಿಗಿಂತ ಮೊದಲು ಸ್ವಿಜರ್ಲೆಂಡ್‌ನಲ್ಲಿ ಖಾತೆ ತೆರೆದ ಮತ್ತು ಈಗಲೂ ಖಾತೆಯನ್ನು ಮುಂದುವರಿಸಿಕೊಂಡು ಹೋಗುತ್ತಿರುವ 15,000 ಗ್ರಾಹಕರಿಗೆ ಮಾತ್ರ ಇದರಿಂದ ತೊಂದರೆಯಾಗುತ್ತಿದೆ ಎಂದು ಜೆಲ್ಲರ್ ವಿವರಣೆ ನೀಡಿದ್ದಾರೆ.

ಇದು ತನ್ನ ಪ್ರಸಕ್ತ ಗ್ರಾಹಕರ ಐದನೇ ಒಂದು ಭಾಗಕ್ಕಿಂತಲೂ ಕಡಿಮೆ ಎಂದೂ ಎಚ್ಎಸ್‌ಬಿಸಿ ಪ್ರೈವೆಟ್ ಬ್ಯಾಂಕ್ ತಿಳಿಸಿದೆ.

ಈ ಬ್ಯಾಂಕಿನ ಮಾಜಿ ಉದ್ಯೋಗಿ ಹೆರ್ವೆ ಫಾಲ್ಸಿನಿಯ ಮೂಲಕ ದಾಖಲೆಗಳನ್ನು ಪಡೆದುಕೊಂಡಿದ್ದ ಫ್ರೆಂಚ್ ಸರಕಾರ, ಸ್ವಿಸ್ ಖಾತೆಗಳಲ್ಲಿ ರಹಸ್ಯ ಮಾಹಿತಿಗಳ ಆಧಾರದಿಂದ ತೆರಿಗೆಯನ್ನು ವಂಚಿಸಿದವರ ವಿರುದ್ಧ ತನಿಖೆಗೆ ಆದೇಶ ನೀಡಿತ್ತು. ಇದೇ ಕಾರಣದಿಂದ ಸ್ವಿಜರ್ಲೆಂಡ್ ಮತ್ತು ಫ್ರಾನ್ಸ್ ಸರಕಾರಗಳು ಕಳೆದ ವರ್ಷ ಭಾರೀ ವಾಗ್ವಾದ ನಡೆಸಿದ್ದವು.
ಸಂಬಂಧಿತ ಮಾಹಿತಿ ಹುಡುಕಿ