ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಹಾರ ಹಣದುಬ್ಬರ ಇತರ ಕ್ಷೇತ್ರಗಳಿಗೆ ವಿಸ್ತರಿಸುತ್ತಿದೆ:ಆರ್‌ಬಿಐ (RBI|Food inflation| Fuels| Manufactured goods)
Bookmark and Share Feedback Print
 
ಅಹಾರ ಹಣದುಬ್ಬರ ದರ ಫೆಬ್ರವರಿ ತಿಂಗಳ ಕೊನೆಯ ವಾರದಲ್ಲಿ ಶೇ.17.81ರಷ್ಟು ಇಳಿಕೆ ಕಂಡಿದೆ.ಆದರೆ ಇಂಧನ ದರಗಳಲ್ಲಿ ಏರಿಕೆಯಾಗಿದ್ದರಿಂದ, ಒಟ್ಟಾರೆ ಹಣದುಬ್ಬರ ಮತ್ತಷ್ಟು ಇಳಿಕೆಯಾಗುವ ಸಾಧ್ಯತೆಗಳು ಕಂಡುಬರುತ್ತಿಲ್ಲ.

ಏತನ್ಮಧ್ಯೆ ಮುಂಬರುವ ಕೆಲ ವಾರಗಳಲ್ಲಿ ಅಹಾರ ದರಗಳು ಇಳಿಕೆಯಾಗುವ ಸಂಕೇತಗಳು ಕಂಡುಬರುತ್ತಿವೆ. ಉತ್ಪಾದನಾ ವಸ್ತುಗಳು ಹಾಗೂ ಇಂಧನ ದರಗಳ ಏರಿಕೆಯಿಂದಾಗಿ, ಮಾರ್ಚ್ ಅಂತ್ಯಕ್ಕೆ ಒಟ್ಟಾರೆ ಹಣದುಬ್ಬರ ದರ ಎರಡಂಕಿ ಗಡಿಯನ್ನು ಪಾರು ಮಾಡಲಿದೆ ಎಂದು ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಅಹಾರ ದರಗಳ ಏರಿಕೆಯಿಂದ ವಾರ್ಷಿಕ ಹಣದುಬ್ಬರ ದರ ಇತರ ಕ್ಷೇತ್ರಗಳತ್ತ ವಿಸ್ತರಿಸುತ್ತಿದೆ. ಆದರೆ ಮುಂಬರುವ ದಿನಗಳಲ್ಲಿ ಅಹಾರ ದರಗಳಲ್ಲಿ ಇಳಿಕೆಯಾಗುವುದರಿಂದ, ಹಣದುಬ್ಬರವೂ ಕೂಡಾ ಇಳಿಕೆಯಾಗಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ ಮೂಲಗಳು ತಿಳಿಸಿವೆ.

ಅಹಾರ ಹಣದುಬ್ಬರ ದರ ಕೇವಲ ಅಹಾರ ಕ್ಷೇತ್ರಕ್ಕೆ ಸ್ಥಗಿತಗೊಂಡಿಲ್ಲ. ಉತ್ಪಾದನಾ ಕ್ಷೇತ್ರ ಸೇರಿದಂತೆ ಇತರ ಕ್ಷೇತ್ರಗಳತ್ತ ತನ್ನ ಹರಿವನ್ನು ವಿಸ್ತರಿಸುತ್ತಿದೆ ಎಂದು ಆರ್‌ಬಿಐ ಉಪಗೌವರ್ನರ್‌ ಸುಬಿರ್ ಗೊಕರ್ಣ್ ಹೇಳಿದ್ದಾರೆ.

ಫೆಬ್ರವರಿ 27ಕ್ಕೆ ವಾರಂತ್ಯಗೊಂಡಂತೆ ಅಹಾರ ಹಣದುಬ್ಬರ ದರದಲ್ಲಿ ಶೇ.0.06ರಷ್ಟು ಇಳಿಕೆ ಕಂಡಿತ್ತು. ಅಗತ್ಯ ದಿನಸಿ ವಸ್ತುಗಳ ದರಗಳ ಏರಿಕೆ ಮುಂದುವರಿದಿದ್ದರಿಂದ, ಅಹಾರ ಹಣದುಬ್ಬರ ಕೂಡಾ ನಿರೀಕ್ಷಿತ ಮಟ್ಟದಲ್ಲಿ ಇಳಿಕೆ ಕಂಡು ಬರುತ್ತಿಲ್ಲ ಎಂದು ಸುಬಿರ್ ಗೊಕರ್ಣ್ ಆತಂಕ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ