ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 'ವೆಬ್‌ದುನಿಯಾ'ಗೆ ಇಂಡಿಯನ್ ಡಿಜಿಟಲ್ ಮೀಡಿಯಾ ಅವಾರ್ಡ್ (Webdunia | Online Advertising | IDMA | Digital marketing)
Bookmark and Share Feedback Print
 
ಅಪರ್ಣ್ ಚಟರ್ಜಿ
WD
ಭಾರತದ ಪ್ರಪ್ರಥಮ ಬಹುಭಾಷೆಗಳ ಪೋರ್ಟಲ್‌‍ 'ವೆಬ್‌ದುನಿಯಾ' ಸಂಸ್ಥೆಗೆ ಆನ್‌ಲೈನ್ ಜಾಹೀರಾತಿನಲ್ಲಿ ಉತ್ತಮ ಭಾಷೆಯ ಬಳಕೆಯಿಂದಾಗಿ 'ಇಂಡಿಯನ್ ಡಿಜಿಟಲ್ ಮೀಡಿಯಾ ಅವಾರ್ಡ್ಸ್‌2010' ಚಿನ್ನದ ಪದಕ ನೀಡಿ ಗೌರವಿಸಲಾಗಿದ್ದು, ಸಂಸ್ಥೆಯ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ಅರ್ಪಣ್ ಚಟರ್ಜಿ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ.

ನಗರದ ತಾಜ್ ಲ್ಯಾಂಡ್ಸ್‌ ಎಂಡ್ ಹೋಟೆಲ್‌ನಲ್ಲಿ ಮಾರ್ಚ್ 11 ರಂದು ನಡೆದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಜಾಹೀರಾತು, ಮಾಧ್ಯಮ ಹಾಗೂ ಮಾರುಕಟ್ಟೆ ಕ್ಷೇತ್ರಗಳ 19 ಮಂದಿ ಸದಸ್ಯರ ತೀರ್ಪುಗಾರರ ಸಮಿತಿ, ಆನ್‌ಲೈನ್ ಜಾಹೀರಾತಿನಲ್ಲಿ ಉತ್ತಮ ಭಾಷಾ ಬಳಕೆಯ ಸೇವೆಯನ್ನು ಪರಿಗಣಿಸಿ ವೆಬ್‌ದುನಿಯಾ ಸಂಸ್ಥೆಗೆ ಪ್ರಶಸ್ತಿ ನೀಡಿ ಗೌರವಿಸಿದೆ. ಆನ್‌ಲೈನ್ ಬ್ಲಾಗ್ ವಿಭಾಗದಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಅಮಿತಾಭ್‌ ಬಚ್ಚನ್ ಅವರಿಗೆ ಕಂಚಿನ ಪದಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ವೆಬ್‌ದುನಿಯಾ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಪಂಕಜ್ ಜೈನ್ ಮಾತನಾಡಿ,ನಮಗೆ ಪ್ರಶಸ್ತಿಯನ್ನು ಸ್ವೀಕರಿಸಿರುವುದಕ್ಕೆ ತುಂಬಾ ಸಂತೋಷವಾಗಿದೆ ಎಂದು ಹೇಳಿದ್ದಾರೆ.

ಡಿಜಿಟಲ್ ಜಾಹೀರಾತಿನಲ್ಲಿ ಬದಲಾವಣೆಗಳಾಗುತ್ತಿರುವ ಹಿನ್ನೆಲೆಯಲ್ಲಿ, ಜಾಹೀರಾತು ಕಂಪೆನಿಗಳು ತಮ್ಮ ಉತ್ಪನ್ನಗಳ ಮಾರಾಟಕ್ಕಾಗಿ ಸ್ಥಳೀಯ ಚಾನೆಲ್‌ಗಳು ಸೇರಿದಂತೆ ಇತರ ಮಾಧ್ಯಮಗಳ ನೆರವನ್ನು ಪಡೆಯುತ್ತಿವೆ ಎಂದು ತಿಳಿಸಿದ್ದಾರೆ.
ಪಂಕಜ್ ಜೈನ್
WD


ಜಾಗತಿಕ ಮಟ್ಟದ ಜಾಹೀರಾತುದಾರರಿಗೆ ಸ್ಥಳೀಯ ಭಾಷೆಗಳಲ್ಲಿ ಜಾಹೀರಾತು ನೀಡಲು ಅವಕಾಶ ಕಲ್ಪಿಸಲಾಗುತ್ತಿರುವುದರಿಂದ, ಗ್ರಾಹಕರಿಗೆ ಸ್ಥಳೀಯ ಭಾಷೆಯ ಜಾಹೀರಾತು ಸುಲಭವಾಗಿ ಅರ್ಥವಾಗುತ್ತದೆ ಎಂದು ಪಂಕಜ್‌ ಜೈನ್ ಅಭಿಪ್ರಾಯಪಟ್ಟಿದ್ದಾರೆ.

ಜಾಗತಿಕ ಮಟ್ಟದ ಸಂಸ್ಥೆಗಳಾದ ಮೈಕ್ರೋಸಾಫ್ಟ್‌, ಟಿಬಿಝ, ಎಸ್‌ಬಿಐ,ಐಡಿಬಿಐ, ಭಾರತ್ ಮ್ಯಾಟ್ರಿ ಮೋನಿ ಸಂಸ್ಥೆಗಳ ಜಾಹೀರಾತುಗಳನ್ನು ಸ್ಥಳೀಯ ಜಾಹೀರಾತು ಕ್ಷೇತ್ರದಲ್ಲಿ ತೊಡಗಿಸಿಕೊಳ್ಳುವುದು ಇದೀಗ ಸವಾಲಾಗಿ ಪರಿಣಮಿಸಿದೆ ಎಂದು ನುಡಿದರು.

ವೆಬ್‌ ದುನಿಯಾ ಸಂಸ್ಥೆ ಆಂಗ್ಲ ಭಾಷೆಯ ಜಾಹೀರಾತುಗಳನ್ನು ಪಡೆದು ಹಿಂದಿ, ಕನ್ನಡ ತೆಲುಗು, ತಮಿಳು, ಮಲೆಯಾಳಂ, ಗುಜರಾತಿ, ಪಂಜಾಬಿ, ಮರಾಠಿ, ಬೆಂಗಾಳಿ ಭಾಷೆಯಲ್ಲಿ ಪರಿವರ್ತಿಸಿ ಜಾಹೀರಾತು ಸೇವೆಯನ್ನು ಒದಗಿಸುತ್ತಿರುವ ಹಿನ್ನೆಲೆಯಲ್ಲಿ, ಗ್ರಾಹಕರಿಗೆ ಸ್ಥಳೀಯ ಭಾಷೆಯಿಂದಾಗಿ, ಉತ್ಪನ್ನಗಳ ಬಗ್ಗೆ ಸಂಪೂರ್ಣ ಮಾಹಿತಿ ದೊರೆತಂತಾಗುತ್ತದೆ ಎಂದು ಪಂಕಜ್‌ ಜೈನ್ ವಿವರಣೆ ನೀಡಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ