ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.16.7ಕ್ಕೆ ಕುಸಿದ ಕೈಗಾರಿಕೆ ವೃದ್ಧಿ ದರ (India| Industry | January)
Bookmark and Share Feedback Print
 
ದೇಶದ ಕೈಗಾರಿಕೆ ವೃದ್ಧಿ ದರ ಡಿಸೆಂಬರ್ ತಿಂಗಳ ಅವಧಿಯಲ್ಲಿ ಶೇ.17.6ರಷ್ಟಿದ್ದು. ಜನೆವರಿ ತಿಂಗಳ ಅವಧಿಯಲ್ಲಿ ಶೇ.16.7ಕ್ಕೆ ಇಳಿಕೆ ಕಂಡಿದೆ.ದರ ಏರಿಕೆ ಹಾಗೂ ಕೇಂದ್ರ ಸರಕಾರ ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂದಕ್ಕೆ ಪಡೆದಿದ್ದರಿಂದ ಮುಂಬರುವ ದಿನಗಳಲ್ಲಿ ಮತ್ತಷ್ಟು ಕುಸಿಯುವ ಭೀತಿಯಿದೆ ಎಂದು ತಜ್ಞರು ಹೇಳಿದ್ದಾರೆ.

ಜಾಗತಿಕ ಆರ್ಥಿಕ ಕುಸಿತ ಹಾಗೂ ನಿಧಾನಗತಿಯ ಆರ್ಥಿಕತೆಯಿಂದಾಗಿ, ದೇಶದ ಉತ್ಪನ್ನಗಳ ಬೇಡಿಕೆಯನ್ನು ಹೆಚ್ಚಿಸಲು ಕೇಂದ್ರ ಸರಕಾರ ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿತ್ತು.ಆದರೆ 2010-11ರ ಬಜೆಟ್ ಮಂಡನೆಯ ಸಂದರ್ಭದಲ್ಲಿ ವಿತ್ತಸಚಿವ ಭಾಗಾಂಶ ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂದಕ್ಕೆ ಪಡೆದಿದ್ದರು.

ಭಾರತೀಯ ರಿಸರ್ವ್ ಬ್ಯಾಂಕ್ ಜನವರಿ ತಿಂಗಳ ಅವಧಿಯ ಆರ್ಥಿಕ ನೀತಿ ಪರಿಷ್ಕರಣ ಸಂದರ್ಭದಲ್ಲಿ, ರೆಪೊ ದರಗಳನ್ನು 50 ಬೇಸಿಸ್ ಪಾಯಿಂಟ್‌ಗಳಷ್ಟು ಹೆಚ್ಚಳ ಮಾಡಿದ್ದರಿಂದ, ಜನೆವರಿ ತಿಂಗಳ ಹಣದುಬ್ಬರ ದರ ಶೇ.8.56ಕ್ಕೆ ಏರಿಕೆ ಕಂಡಿತ್ತು.ಏಪ್ರಿಲ್ ಮತ್ತು ಜನೆವರಿ ತಿಂಗಳ ಅವಧಿಯಲ್ಲಿ ಕೈಗಾರಿಕೆ ವೃದ್ಧಿ ದರ ಶೇ.9.6ಕ್ಕೆ ತಲುಪಿತ್ತು.

ಡಿಸೆಂಬರ್ ತಿಂಗಳ ಅವಧಿಯಲ್ಲಿ ಉತ್ಪಾದನಾ ವೃದ್ಧಿ ದರ ಶೇ.18.5ಕ್ಕೆ ತಲುಪಿತ್ತು. ಆದರೆ ಜನೆವರಿ ತಿಂಗಳ ಅವಧಿಯಲ್ಲಿ ಶೇ.17.9ಕ್ಕೆ ಕುಸಿದಿದೆ ಎಂದು ಕೈಗಾರಿಕೆ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ