ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಜೂನ್‌ನಲ್ಲಿ ಭಾರತದೊಂದಿಗೆ ಪರಮಾಣು ಒಪ್ಪಂದ:ಕೆನಡಾ (India | Canada | Sign | Nuke deal)
Bookmark and Share Feedback Print
 
ಭಾರತದ ಪ್ರಧಾನಮಂತ್ರಿ ಮನಮೋಹನ್ ಸಿಂಗ್ ಜೂನ್ ತಿಂಗಳ ಅವಧಿಯಲ್ಲಿ ಕೆನಡಾ ದೇಶಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿಹಾಕಲಿದ್ದುಇದರಿಂದ ಉಭಯ ದೇಶಗಳ ಸಂಬಂಧಗಳು ಮತ್ತಷ್ಟು ಉತ್ತಮಗೊಳ್ಳಲಿವೆ ಎಂದು ಕೆನಡಾ ರಾಯಭಾರಿ ಕಚೇರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಭಾರತ ಹಾಗೂ ಕೆನಡಾ ದೇಶಗಳ ನಡುವೆ ನಾಗರಿಕ ಪರಮಾಣು ಒಪ್ಪಂದ ಪೂರ್ಣಗೊಂಡಲ್ಲಿ,ಉಭಯ ದೇಶಗಳ ಮಧ್ಯೆ ವ್ಯಾಪಾರ ವಹಿವಾಟಿನಲ್ಲಿ ಮತ್ತಷ್ಟು ಚೇತರಿಕೆ ಕಾಣಲಿವೆ ಎಂದು ಕೆನಡಾದ ಆರ್ಥಿಕ ಮತ್ತು ವಾಣಿಜ್ಯ ಖಾತೆ ಸಚಿವ ಮಾರಿಯೊ ಸ್ಟೆ-ಮಾರೈ ತಿಳಿಸಿದ್ದಾರೆ.

ನಾಗರಿಕ ಪರಮಾಣು ವಿಭಾಗದ ತಜ್ಞರ, ಉಪಕರಣಗಳ ಹಾಗೂ ಇಂಜಿನಿಯರಿಂಗ್ ಸೇವೆಗಳನ್ನು ಭಾರತಕ್ಕೆ ಒದಗಿಸಲು ಕೆನಡಾ ಸಿದ್ಧವಾಗಿದೆ. ದೇಶದಲ್ಲಿರುವ ಪರಮಾಣು ಘಟಕಗಳಿಗೆ ಅಗತ್ಯವಾದ ಸಂಪೂರ್ಣ ನೆರವು ನೀಡಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ನವೆಂಬರ್ ತಿಂಗಳ ಅವಧಿಯಲ್ಲಿ ಭಾರತ ಮತ್ತು ಕೆನಡಾ ದೇಶಗಳು ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿಹಾಕಿದ್ದವು. ಕೆನಡಾದ ನ್ಯೂಕ್ಲಿಯರ್ ತಂತ್ರಜ್ಞಾನ ಮತ್ತು ಯುರೇನಿಯಂ ಭಾರತ ಪಡೆಯಬಹುದಾಗಿದೆ ಎಂದು ಹೇಳಿದ್ದಾರೆ.

ಕೆನಡಾದ ವಾಣಿಜ್ಯ ಮತ್ತು ಆರ್ಥಿಕ ಖಾತೆ ಸಚಿವ ಸ್ಟೆ ಮಾರೈ, ಉದ್ಯಮಿಗಳ ನಿಯೋಗದೊಂದಿಗೆ ಭಾರತಕ್ಕೆ ಭೇಟಿ ನೀಡಲಿದ್ದು, ಉದ್ಯಮಿಗಳು, ಸರಕಾರಿ ಅಧಿಕಾರಿಗಳು, ವಿಜ್ಞಾನಿಗಳೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ವಿದೇಶಾಂಗ ವ್ಯವಹಾರಗಳ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ