ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಚಿನ್ನದ ದರ:ಪ್ರತಿ 10ಗ್ರಾಂಗೆ 16,780 ರೂಪಾಯಿ (Gold | Silver | Bullion market | Standard gold | Seasonal demand)
Bookmark and Share Feedback Print
 
ಸಾಗರೋತ್ತರ ಮಾರುಕಟ್ಟೆಯಲ್ಲಿ ಚಿನ್ನದ ದರ ಸತತ ಎಂಟನೇ ದಿನವೂ ಕುಸಿತ ಕಂಡಿದೆ.ಇಂದಿನ ವಹಿವಾಟಿನಲ್ಲಿ ಚಿನ್ನದ ದರ ಪ್ರತಿ 10ಗ್ರಾಂಗೆ 16,780 ರೂಪಾಯಿಗಳಿಗೆ ತಲುಪಿದೆ. ಆದರೆ ಬೆಳ್ಳಿ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ ದರದಲ್ಲಿ ಕೂಡಾ ಏರಿಕೆಯಾಗಿದೆ.

ಸ್ಟ್ಯಾಂಡರ್ಡ್‌ ಚಿನ್ನ ಮತ್ತು ಆಭರಣ ದರಗಳಲ್ಲಿ ತಲಾ 10 ರೂಪಾಯಿ ದರ ಇಳಿಕೆಯಾಗಿ ಪ್ರತಿ 10ಗ್ರಾಂಗೆ 16,780 ಮತ್ತು 16,630 ರೂಪಾಯಿಗಳಿಗೆ ತಲುಪಿದೆ.

ಸೀಜನ್ ಬೇಡಿಕೆ ಕಡಿಮೆಯಾದ ಹಿನ್ನೆಲೆಯಲ್ಲಿ ಖರೀದಿಯಲ್ಲಿ ಇಳಿಕೆಯಾಗಿದ್ದರಿಂದ, ಚಿನ್ನದ ದರದಲ್ಲಿ ಕುಸಿತವಾಗಿದೆ ಎಂದು ಮಾರುಕಟ್ಟೆಯ ಮೂಲಗಳು ತಿಳಿಸಿವೆ.

ಚಿನ್ನದ ದರದಲ್ಲಿ ಮತ್ತಷ್ಟು ಕುಸಿತವಾಗುವ ಸಾಧ್ಯತೆಗಳಿಂದಾಗಿ, ಚಿಲ್ಲರೆ ಖರೀದಿಸುವ ಗ್ರಾಹಕರು ಕೂಡಾ ಚಿನ್ನದ ಖರೀದಿಯಿಂದ ದೂರವಾಗಿದ್ದರಿಂದ, ಚಿನ್ನದ ಮತ್ತಷ್ಟು ಕುಸಿತ ಕಂಡಿದೆ.

ಬೆಳ್ಳಿಯ ಖರೀದಿಯಲ್ಲಿ ಏರಿಕೆಯಾಗಿದ್ದರಿಂದ ಪ್ರತಿ ಕೆಜಿಗೆ 250 ರೂಪಾಯಿಗಳಷ್ಟು ಏರಿಕೆಯಾಗಿ, 26,950 ರೂಪಾಯಿಗಳಿಗೆ ತಲುಪಿದೆ ಎಂದು ಚಿನಿವಾರಪೇಟೆಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ