ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 10ಲಕ್ಷ ಕಾರುಗಳ ಮಾರಾಟದ ಗುರಿ:ಮಾರುತಿ ಸುಝುಕಿ (Car|Maruti Suzuki | Sales | Toyota | GM | Volkswagen | Ford)
Bookmark and Share Feedback Print
 
ದೇಶದಲ್ಲಿ ಕಳೆದ 26 ವರ್ಷಗಳಿಂದ ಕಾರು ಮಾರಾಟ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಮಾರುತಿ ಸುಝುಕಿ,ಪ್ರಸಕ್ತ ಆರ್ಥಿಕ ಸಾಲಿನ ಅಂತ್ಯಕ್ಕೆ 10 ಲಕ್ಷ ಕಾರುಗಳ ಮಾರಾಟದ ದಾಖಲೆಯನ್ನು ಸ್ಥಾಪಿಸುವ ಗುರಿಯನ್ನು ಹೊಂದಿದೆ.

ಮಾರುತಿ ಕಂಪೆನಿ ಮೂಲತಃ ಸರಕಾರ ಮತ್ತು ಸುಝುಕಿಯೊಂದಿಗೆ ಜಂಟಿ ಸಹಭಾಗಿತ್ವದಲ್ಲಿ ಆರಂಭಿಸಲಾಗಿತ್ತು. ನಂತರದ ಅವಧಿಯಲ್ಲಿ ಸರಕಾರ ತನ್ನ ಪಾಲನ್ನು ಹಿಂದಕ್ಕೆ ಪಡೆದುಕೊಂಡಿತ್ತು. ಈಗಾಗಲೇ ಟೋಯೋಟಾ, ಜಿಎಂ ವೊಕ್ಸ್‌ವಾಗನ್, ಫೋರ್ಡ್, ಮತ್ತು ರೆನಾಲ್ಟ್ ಕಂಪೆನಿಗಳು ಏಳಂಕಿ ಮಾರಾಟದ ದಾಖಲೆಯನ್ನು ಸ್ಥಾಪಿಸಿವೆ.

ಮಾರುತಿ ಸುಝುಕಿ ಕಂಪೆನಿ ಏಪ್ರಿಲ್ 09ರಿಂದ ಫೆಬ್ರವರಿ10ರ ವರೆಗೆ 9.31ಲಕ್ಷ ಕಾರುಗಳನ್ನುಈಗಾಗಲೇ ಮಾರಾಟ ಮಾಡಲಾಗಿದೆ.ಪ್ರಸಕ್ತ ತಿಂಗಳ ಮೂರನೇ ವಾರದಲ್ಲಿ 10 ಲಕ್ಷ ಕಾರುಗಳ ಮಾರಾಟದ ದಾಖಲೆಯ ಗುರಿಯನ್ನು ತಲುಪುವ ವಿಶ್ವಾಸವಿದೆ ಎಂದು ಮಾರುತಿ ಕಂಪೆನಿಯಾ ಅಧ್ಯಕ್ಷ ಆರ್‌.ಸಿ.ಭಾರ್ಗವ್ ತಿಳಿಸಿದ್ದಾರೆ.

ಸುಝುಕಿ ಮುಖ್ಯಸ್ಥ ಒಸಾಮು ಸುಝುಕಿ 1980ರ ದಶಕದಲ್ಲಿ ಭಾರತದ ಕಾರು ಮಾರುಕಟ್ಟೆಗೆ ಮಾರುತಿ ಕಾರು ಪರಿಚಯಿಸಿ ತಮ್ಮದೇ ಆದ ಖ್ಯಾತಿಯನ್ನು ಮೂಡಿಸಿದ್ದರು.ಮಾರುತಿ ಸುಝುಕಿ ಆಯೋಜಿಸಿ ವಿಶೇಷ ಸಮಾರಂಭಕ್ಕಾಗಿ ಭಾರತಕ್ಕೆ ಆಗಮಿಸಲಿದ್ದಾರೆ ಎಂದು ಭಾರ್ಗವಾ ಸಂತಸ ವ್ಯಕ್ತಪಡಿಸಿದ್ದಾರೆ.

1980ರ ದಶಕದಲ್ಲಿ ವಾರ್ಷಿಕ ಮಾರುತಿ ಕಾರುಗಳ ಮಾರಾಟ 40 ಸಾವಿರಕ್ಕೆ ತಲುಪಿತ್ತು.ಇದೀಗ ಕಾರುಗಳ ಮಾರಾಟ ವಾರ್ಷಿಕವಾಗಿ 10ಲಕ್ಷಕ್ಕೆ ತಲುಪಿದೆ.

ಸಣ್ಣ ಕಾರುಗಳ ಕ್ಷೇತ್ರದಲ್ಲಿ ಟಾಟಾ ಮೋಟಾರ್ಸ್‌ನ ನ್ಯಾನೋ, ಟೋಯೋಟಾ, ಫೋರ್ಡ್, ವೊಕ್ಸ್‌ವಾಗನ್ ಮತ್ತು ಜನರಲ್ ಮೋಟಾರ್ಸ್ ಕಂಪೆನಿಗಳ ಸ್ಪರ್ಧೆಯ ಮಧ್ಯೆಯು ಮಾರುತಿ ಕಾರುಗಳ ಮಾರಾಟದಲ್ಲಿ ಏರಿಕೆಯಾಗಿದೆ ಎಂದು ಕಂಪೆನಿಯ ಅಧ್ಯಕ್ಷ ಆರ್‌.ಸಿ.ಭಾರ್ಗವ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ