ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 1 ಲಕ್ಷ ಕೋಟಿ ರೂ.ತಲುಪಿದ ರಸಗೊಬ್ಬರ ಅನುದಾನ:ಜಿನಾ (Fertiliser subsidy | Parliament | Fiscal | International market)
Bookmark and Share Feedback Print
 
ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಸಗೊಬ್ಬರ ದರಗಳು ಏರಿಕೆಯಾದ ಹಿನ್ನೆಲೆಯಲ್ಲಿ,ಕೇಂದ್ರ ಸರಕಾರ 2008-09ರ ಅವಧಿಯಲ್ಲಿ 1ಲಕ್ಷ ಕೋಟಿ ರೂಪಾಯಿಗಳ ಅನುದಾನವನ್ನು ನೀಡಿದೆ.ಕಳೆದ 2007-08ರ ಅವಧಿಗೆ ಹೋಲಿಸಿದಲ್ಲಿ ದ್ವಿಗುಣವಾಗಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.

ಕೇಂದ್ರದ ರಸಗೊಬ್ಬರ ಇಲಾಖೆ 2007-08ರ ಸಾಲಿನಲ್ಲಿ 43,319.16 ಕೋಟಿ ರೂಪಾಯಿಗಳ ಅನುದಾನ ನೀಡಿತ್ತು. ಆದರೆ 2008- 09ರ ಸಾಲಿನಲ್ಲಿ 99,494.71 ಕೋಟಿ ರೂಪಾಯಿಗಳ ಅನುದಾನ ನೀಡಿಕೆಯಲ್ಲಿ ದ್ವಿಗುಣವಾಗಿದೆ ಎಂದು ರಸಗೊಬ್ಬರ ಖಾತೆ ಸಚಿವ ಶ್ರೀಕಾಂತ್ ಕುಮಾರ್ ಜೆನಾ ರಾಜ್ಯಸಭೆಗೆ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ರಸಗೊಬ್ಬರ ದರಗಳು ಏರಿಕೆ ಹಾಗೂ ರಸಗೊಬ್ಬರ ಬಳಕೆಯಲ್ಲಿ ಹೆಚ್ಚಳದಿಂದಾಗಿ ರಸಗೊಬ್ಬರ ಅನುದಾನದಲ್ಲಿ ದ್ವಿಗುಣವಾಗಿದೆ ಎಂದು ಜೆನಾ ಸಂಸತ್ತಿಗೆ ಮಾಹಿತಿಗೆ ನೀಡಿದ್ದಾರೆ.

ಭಾರತದ ಯೂರಿಯಾ ಬಳಕೆ 2008-09ರ ಸಾಲಿನಲ್ಲಿ 266.47 ಲಕ್ಷ ಟನ್‌ಗಳಾಗಿದೆ. ಕಳೆದ ವರ್ಷದ ಅವಧಿಯಲ್ಲಿ 261.67 ಲಕ್ಷ ಟನ್‌ಗಳಾಗಿತ್ತು.ಡಿಎಪಿ,ಎಂಒಪಿ,ಮತ್ತು ಕಾಂಪ್ಲೆಕ್ಸ್‌ ರಸಗೊಬ್ಬರ ಬಳಕೆ 99.04 ಲಕ್ಷ ಟನ್‌ಗಳಾಗಿದೆ ಎಂದು ಸಚಿವ್ ಶ್ರೀಕಾಂತ್ ಜೈನ್ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ