ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಝಾಮ್‌ಟೆಲ್ ಖರೀದಿ ಯೋಜನೆ ಸ್ಥಗಿತ:ಬಿಎಸ್‌ಎನ್‌ಎಲ್ (BSNL | Zamtel bid | Zambia | Telecommunication | BSNL board)
Bookmark and Share Feedback Print
 
ಭಾರತ ಸರಕಾರಿ ಸ್ವಾಮ್ಯದ ಟೆಲಿಕಾಂ ಕಂಪೆನಿ ಭಾರತ್ ಸಂಚಾರ ನಿಗಮ ಲಿಮಿಟೆಡ್, ಝಾಂಬಿಯಾದ ಟೆಲಿಕಾಂ ಕಂಪೆನಿ ಝಾಮ್‌ಟೆಲ್ ಕಂಪೆನಿಯನ್ನು ಖರೀದಿಸುವ ನಿರ್ಧಾರವನ್ನು ಹಿಂತೆಗೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.

ಝಾಮ್‌ಟೆಲ್ ಸಂಸ್ಥೆ ನಷ್ಟ ಎದುರಿಸುತ್ತಿರುವ ಹಿನ್ನೆಲೆಯಲ್ಲಿ, ಝಾಮ್‌ಟೆಲ್ ಕಂಪೆನಿಯ ಸ್ವಾಧೀನಕ್ಕಾಗಿ ಬಿಎಸ್‌ಎನ್‌ಎಲ್ ಸಂಸ್ಥೆ ಸರಕಾರದ ಮುಂದೆ ಸಲ್ಲಿಸಲಾದ ಪ್ರಸ್ತಾವನೆಗೆ ಅನುಮತಿ ನೀಡುವ ಮುನ್ನ ಬಿಎಸ್‌ಎನ್‌ಎಲ್‌ ನಷ್ಟವನ್ನು ಸರಿಪಡಿಸಿಕೊಳ್ಳಬೇಕಾಗಿದೆ ಎಂದು ಅನಾಮಧೇಯರಾಗಿರಲು ಬಯಸಿದ ಅಧಿಕಾರಿಗಳು ತಿಳಿಸಿದ್ದಾರೆ.

ಝಾಮ್‌ಟೆಲ್ ಕಂಪೆನಿಯ ಶೇ.75ರಷ್ಟು ಶೇರುಗಳನ್ನು ಮಾರಾಟ ಮಾಡಲು ಕಂಪೆನಿಯ ಮಾಲೀಕತ್ವ ಹೊಂದಿದ ಝಾಂಬಿಯಾ ಸರಕಾರ ನಿರ್ಧರಿಸಿದೆ ಎಂದು ವರದಿಗಳು ಬಹಿರಂಗವಾಗಿವೆ.

ಝಾಮ್‌ಟೆಲ್ ಕಂಪೆನಿಯ ಖರೀದಿಸುವ ಅಥವಾ ಕೈಬಿಡುವ ಬಗ್ಗೆ ಬುಧವಾರದಂದು ನಡೆಯಲಿರುವ ಸಭೆಯಲ್ಲಿ ಬಿಎಸ್‌ಎನ್‌ಎಲ್ ಅಡಳಿತ ಮಂಡಳಿ ನಿರ್ಧರಿಸಲಿದೆ ಎಂದು ಬಿಎಸ್‌ಎನ್‌ಎಲ್ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ