ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಹೂಡಿಕೆ:ಭಾರತ ಮೂರನೇ ಪ್ರಶಸ್ತ ರಾಷ್ಟ್ರ (FDI Investment, India, Investment destinations)
Bookmark and Share Feedback Print
 
ವಿಶ್ವದ ಪ್ರಶಸ್ತ ಆರ್ಥಿಕ ಹೂಡಿಕೆ ರಾಷ್ಟ್ರಗಳಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಆದರೆ ಸರಕಾರದ ಕೆಲ ಆರ್ಥಿಕ ನೀತಿಗಳಿಂದಾಗಿ ಬಂಡವಾಳದ ಹೊರಹರಿವಿಗೆ ತಡೆಯಾಗಿದೆ ಎಂದು ಕೊಲಂಬಿಯಾ ವಿಶ್ವವಿದ್ಯಾಲಯ ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.

ವಿದೇಶಿ ಬಂಡವಾಳ ಹೂಡಿಕೆ ನೀತಿಗಳಲ್ಲಿ ಹಾಗೂ ಇತರ ಆರ್ಥಿಕ ಕ್ಷೇತ್ರಗಳಲ್ಲಿ ಮುಕ್ತ ಸ್ವಾತಂತ್ರ ಅಗತ್ಯವಾಗಿದೆ.ಜಾಗತಿಕವಾಗಿ ಆರ್ಥಿಕತೆಯಲ್ಲಿ ವೇಗವಾಗಿ ಸಾಗುತ್ತಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಭಾರತದಲ್ಲಿ ಹೂಡಿಕೆಗೆ ಆದ್ಯತೆ ನೀಡುತ್ತಿದ್ದಾರೆ ಎಂದು ಮೂಳಗಲಉ ತಿಳಿಸಿವೆ.

ಆರಂಭದಲ್ಲಿ ವಿದೇಶಿ ಬಂಡವಾಳ ಹೂಡಿಕೆದಾರರು ಉತ್ಪಾದನಾ ವಿದ್ಯುತ್ ಮತ್ತು ಟೆಲಿಕಾಂ ಕಂಪೆನಿಗಳ ಕ್ಷೇತ್ರಗಳಲ್ಲಿ ಆಸಕ್ತಿಯನ್ನು ಹೊಂದಿದ್ದರು. ಆದರೆ ಇದೀಗ ಸೇವಾ ಕ್ಷೇತ್ರಗಳತ್ತ ಗಮನಹರಿಸುತ್ತಿದ್ದಾರೆ ಎಂದು ವರದಿಯಲ್ಲಿ ಬಹಿರಂಗಪಡಿಸಲಾಗಿದೆ.

1990ರ ಅವಧಿಯಲ್ಲಿ ಹೂಡಿಕೆ ಕಂಪೆನಿಗಳು ಅಭಿವೃದ್ಧಿ ಹೊಂದಿದ ರಾಷ್ಟ್ರಗಳಲ್ಲಿ ಹೂಡಿಕೆಗೆ ಆದ್ಯತೆ ನೀಡುತ್ತಿದ್ದವು. ಕಳೆದ ದಶಕದಿಂದ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಲ್ಲಿ ಹೂಡಿಕೆಗಾಗಿ ಆಸಕ್ತಿ ತೋರುತ್ತಿವೆ ಎಂದು ಅಧ್ಯಯನ ವರದಿಯಲ್ಲಿ ಪ್ರಕಟಿಸಲಾಗಿದೆ.
ಸಂಬಂಧಿತ ಮಾಹಿತಿ ಹುಡುಕಿ