ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಏರಿಂಡಿಯಾ ವಿಲೀನಕ್ಕೆ ಸಂಸದೀಯ ಸಮಿತಿ ವಿರೋಧ (Pranab Mukherjee | Government | Air India | Merge)
Bookmark and Share Feedback Print
 
ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಏರಿಂಡಿಯಾ ಮತ್ತು ಇಂಡಿಯನ್ ಏರ್‌ಲೈನ್ಸ್ ವಿಲೀನಕ್ಕೆ ಸಂಸದೀಯ ಸಮಿತಿ ಅಸಮ್ಮತಿ ಸೂಚಿಸಿರುವ ಕುರಿತಂತೆ ಹೇಳಿಕೆ ನೀಡಲು ವಿತ್ತಸಚಿವ ಪ್ರಣಬ್ ಮುಖರ್ಜಿ ನಿರಾಕರಿಸಿದ್ದಾರೆ.

ಸಂಸದೀಯ ಸಮಿತಿಯ ನಿರ್ಧಾರದ ಬಗ್ಗೆ ಹೇಳಿಕೆ ನೀಡಲಾರೆ. ಸಂಸದೀಯ ಸಮಿತಿಗೆ ತನ್ನದೇ ಆದ ಅಧಿಕಾರವಿದೆ ಎಂದು ಮುಖರ್ಜಿ ತಿಳಿಸಿದ್ದಾರೆ.

ಏರಿಂಡಿಯಾ ಹಾಗೂ ಇಂಡಿಯನ್ ಏರ್‌ಲೈನ್ಸ್ ವಿಲೀನ ನಿರ್ಧಾರ ತೆಗೆದುಕೊಂಡಿರುವ ಸಚಿವ ಸಂಪುಟ ಸಮಿತಿಗೆ ಮುಖರ್ಜಿ ನೇತೃತ್ವವಹಿಸಿದ್ದಾರೆ.

ಸಿಂಗಲ್ಸ್ ಹೋಲ್ಡಿಂಗ್‌ ಕಂಪೆನಿಯ ಅಧಿಕಾರದಡಿಯಲ್ಲಿ ದೇಶಿಯ ಮತ್ತು ಅಂತಾರಾಷ್ಟ್ರೀಯ ಏರ್‌ಲೈನ್‌ಗಳನ್ನು ಪ್ರತ್ಯೇಕಗೊಳಿಸುವಂತೆ ಸಂಸದೀಯ ಸಮಿತಿ ಸರಕಾರಕ್ಕೆ ಶಿಫಾರಸು ಮಾಡಿದೆ.
ಸಂಬಂಧಿತ ಮಾಹಿತಿ ಹುಡುಕಿ