ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವೊಕ್ಸ್‌ವಾಗನ್ ನಿವ್ವಳ ಲಾಭದಲ್ಲಿ ಶೇ.80ರಷ್ಟು ಹೆಚ್ಚಳ (Volkswagen | Wolfsburg | European | Net profit | Global auto industry)
Bookmark and Share Feedback Print
 
ಯುರೋಪ್‌ನ ಬೃಹತ್ ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ವೊಕ್ಸ್‌ವಾಗನ್, ಪ್ರಸಕ್ತ ವರ್ಷದ ಆರ್ಥಿಕ ಸಾಲಿನ ನಿವ್ವಳ ಲಾಭದಲ್ಲಿ ಶೇ.80ರಷ್ಟು ಏರಿಕೆಯಾಗಿದೆ.ಮುಂದಿನ ಆರ್ಥಿಕ ಸಾಲಿನಲ್ಲಿ ಕೂಡಾ ವಹಿವಾಟಿನಲ್ಲಿ ಚೇತರಿಕೆ ಕಾಣುವ ನಿರೀಕ್ಷೆಗಳಿವೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

2009ರ ಅವಧಿಯ ನಿವ್ವಳ ಲಾಭದಲ್ಲಿ ಶೇ.80.57ರಷ್ಟು ಏರಿಕೆಯಾಗಿ 911 ಮಿಲಿಯನ್ ಯುರೋಗಳಿಗೆ ಏರಿಕೆ ಕಂಡಿದೆ. ಹಿಂದಿನ ವರ್ಷದ ಅವಧಿಯಲ್ಲಿ 4,688 ಮಿಲಿಯನ್ ಯುರೋಗಳಷ್ಟು ಲಾಭಗಳಿಸಿತ್ತು ಎಂದು ಕಂಪೆನಿ ಹೊರಡಿಸಿದ ಪ್ರಕಟಣೆಯಲ್ಲಿ ತಿಳಿಸಿದೆ.

2008ರಲ್ಲಿ ಕಾರ್ಯಾಚರಣೆ ನಿವ್ವಳ ಲಾಭದಲ್ಲಿ 6.3 ಬಿಲಿಯನ್ ಯುರೋಗಳಾಗಿತ್ತು.ಆದರೆ 2009ರ ಅವಧಿಯ ನಿವ್ವಳ ಲಾಭದಲ್ಲಿ ಶೇ.69.84 ರಷ್ಟು ಕುಸಿತ ಕಂಡಿದೆ.

ವೊಕ್ಸ್‌ವಾಗನ್ ಗ್ರೂಪ್‌, ಇದೀಗ ಜಪಾನ್‌ ಮೂಲದ ಸುಝುಕಿ ಕಂಪೆನಿಯಲ್ಲಿ ಶೇ.20ರಷ್ಟು ಶೇರುಗಳನ್ನು ಖರೀದಿಸಿದೆ. ಮುಂದಿನ ವರ್ಷದ ವಹಿವಾಟಿನಲ್ಲಿ ಕೂಡಾ ಚೇತರಿಕೆ ಮುಂದುವರಿಯಲಿದೆ ಎಂದು ಮಾರುತಿ ಸುಝುಕಿ ಇಂಡಿಯಾ ಕಂಪೆನಿಯ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ