ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಗೋಏರ್‌ನಿಂದ 200 ಹೊಸ ವಿಮಾನಗಳ ಖರೀದಿ (GoAir Airlines | Flights)
Bookmark and Share Feedback Print
 
ವಾಡಿಯಾ ಒಡೆತನದ ಗೋಏರ್ ವಿಮಾನಯಾನ ಸಂಸ್ಥೆ ಇನ್ನೂ ಹೆಚ್ಚುವರಿ 200 ವಿಮಾನಗಳನ್ನು ಖರೀದಿಸುವ ಚಿಂತನೆಯಲ್ಲಿದೆ.

ಈ ಕೊಳ್ಳುವಿಕೆಯಿಂದ ಗೋಏರ್ ಸಂಸ್ಥೆಯ ಬಳಿ 1,850 ವಿಮಾನಗಳು ಪ್ರತಿ ತಿಂಗಳು ಹಾರಾಟ ನಡೆಸಲಿವೆ ಎಂದು ಮೂಲಗಳು ತಿಳಿಸಿವೆ.

ನಾವು 200 ವಿಮಾನಗಳನ್ನು ಶೀಘ್ರದಲ್ಲೇ ಕೊಳ್ಳಲು ಬಯಸಿದ್ದು, ಇದು ಶೇ.10ರಷ್ಟು ನಮ್ಮ ಸಾಮರ್ಥವನ್ನೂ ಹೆಚ್ಚಿಸಲಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸದ್ಯ ಗೋಏರ್ ಸಂಸ್ಥೆ 1,650 ವಿಮಾನಗಳನ್ನು ಪ್ರತಿ ತಿಂಗಳು ಹಾರಾಟ ನಡೆಸುತ್ತಿದೆ.

ಈ ಹೊಸ ವಿಮಾನಗಳ ಖರೀದಿ ನಂತರ ಹೊಸ ಸ್ಥಳಗಳಿಗೂ ವಿಮಾನಯಾನ ಸೇವೆಯನ್ನು ವಿಸ್ತರಿಸಲು ಗೋಏರ್ ಏರ್‌ಲೈನ್ ಚಿಂತಿಸಿದ್ದು, ಇದೇ ಎ.6ರಿಂದ ಈ ಸೇವೆ ಆರಂಭವಾಗಲಿದೆ. ಮಹಾರಾಷ್ಟ್ರದ ನಾಗಪುರ ಸೇರಿದಂತೆ ಕೆಲವು ಹೊಸ ಸ್ಥಳಗಳ ಆಯ್ಕೆ ನಡೆದಿದೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ಗೋ ಏರ್, ವಿಮಾನಯಾನ