ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 2015ರೊಳಗೆ ಎಲ್ಲಾ ಹಳ್ಳಿಗಳಿಗೆ ಬ್ಯಾಂಕಿಂಗ್ ಸೌಲಭ್ಯ! (Indian Villages | Banking | RBI)
Bookmark and Share Feedback Print
 
ದೇಶದ ಎಲ್ಲಾ ಹಳ್ಳಿ ಹಳ್ಳಿಗಳಿಗೂ 2015ರ ವೇಳೆಗೆ ಬ್ಯಾಂಕ್ ಸೌಲಭ್ಯ ದೊರೆಯಲಿದೆ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯೂಟಿ ಗವರ್ನರ್ ಕೆ.ಸಿ.ಚಕ್ರವರ್ತಿ ಹೇಳಿದ್ದಾರೆ.

ಬಯೋಮೆಟ್ರಿಕ್ ಸ್ಮಾರ್ಟ್ ಕಾರ್ಡ್‌ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ನಮ್ಮ ದೇಶದ ಹಳ್ಳಿಗಳ ಸಮಸ್ಯೆಗಳನ್ನು ಗಮನಿಸಿ ಹಾಗೂ ಅಲ್ಲಿರುವ ತಾಂತ್ರಿಕ ಉಪಯುಕ್ತತೆಯನ್ನು ಗಮನಿಸಿ ನಾವು ಮುಂಬರು 2015ರ ವೇಳೆಗೆ ಎಲ್ಲಾ ಹಳ್ಳಿಗಳಿಗೂ ಬ್ಯಾಂಕಿಗ್ ಮೂಲಕ ತಲುಪಲು ಚಿಂತಿಸಿದ್ದೇವೆ. ಇದಕ್ಕಾಗಿ ನಾವು ಹಳ್ಳಿಗಳಲ್ಲಿ ಬ್ರ್ಯಾಂಚ್ ಇಲ್ಲದ ಬ್ಯಾಂಕಿಂಗ್ ವ್ಯವಸ್ಥೆ ಆರಂಭಿಸಲಿದ್ದು, ಇದು ಸ್ಮಾರ್ಟ್ ಕಾರ್ಡ್‌ಗಳ ಮೂಲಕ ಮಾಡುವ ಉದ್ದೇಶವಿದೆ. ಆ ಪ್ರದೇಶಗಳಲ್ಲಿರುವ ದೊಡ್ಡ ಬ್ಯಾಂಕುಗಳ ಮೂಲಕ ಈ ವ್ಯವಸ್ಥೆ ರೂಪಿಸುವ ವಿಶ್ವಾಸವಿದೆ ಎಂದು ಅವರು ತಿಳಿಸಿದರು.

2012ರೊಳಗೆ 2000ಕ್ಕಿಂತ ಹೆಚ್ಚು ಜನಸಂಖ್ಯೆಯಿರುವ ಹಳ್ಳಿಗಳಲ್ಲಿ ರಸ್ತೆ ಸೌಲಭ್ಯ ಆಧರಿಸಿ ಸಮೀಕ್ಷೆ ನಡೆಸಲಿದ್ದು, ಈ ಕುರಿತು ಕೂಲಂಕುಷವಾಗಿ ಚಿಂತಿಸಿ, ಆ ಹಳ್ಳಿಗಳಿಗೆ ಬ್ಯಾಂಕಿಂಗ್ ವ್ಯವಸ್ಥೆ ರೂಪಿಸಲಾಗುತ್ತದೆ ಎಂದು ಅವರು ಹೇಳಿದರು.
ಸಂಬಂಧಿತ ಮಾಹಿತಿ ಹುಡುಕಿ