ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಶೇ.9.89ಕ್ಕೆ ತಲುಪಿದ ಹಣದುಬ್ಬರ ದರ (WPI | Government | Inflation | Food price inflation)
Bookmark and Share Feedback Print
 
PTI
ಕಳೆದ ತಿಂಗಳು ಸಗಟು ಸೂಚ್ಯಂಕ ಹಣದುಬ್ಬರ ದರ ಶೇ.8.6ರಷ್ಟಿದ್ದು,ಪ್ರಸಕ್ತ ತಿಂಗಳ ಅವಧಿಯಲ್ಲಿ ಶೇ.9.89ಕ್ಕೆ ಏರಿಕೆಯಾಗಿದೆ.ಅಗತ್ಯ ವಸ್ತುಗಳ ದರ ಏರಿಕೆ ನಿಯಂತ್ರಣಕ್ಕೆ ಸೂಕ್ತ ನೀತಿಗಳನ್ನು ರೂಪಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಒತ್ತಡವನ್ನು ಎದುರಿಸುತ್ತಿದೆ.

ಫೆಬ್ರವರಿ ತಿಂಗಳ ಅವಧಿಯಲ್ಲಿ ಅಗತ್ಯ ಅಹಾರ ವಸ್ತುಗಳ ಸೂಚ್ಯಂಕ ದರ 284.7ರಷ್ಟಿದ್ದು, ಯಾವುದೇ ಬದಲಾವಣೆಯಾಗಿಲ್ಲ.ಆದರೆ ಉತ್ಪಾದಕ ವಸ್ತುಗಳ ಸೂಚ್ಯಂಕ ದರದಲ್ಲಿ ಶೇ.0.6 ರಷ್ಟು ಏರಿಕೆ ಕಂಡು ಸೂಚ್ಯಂಕ ದರ 214.3ಕ್ಕೆ ತಲುಪಿದೆ.

ಇಂಧನ ದರಗಳ ಏರಿಕೆಯಿಂದಾಗಿ ಸೂಚ್ಯಂಕ ದರದಲ್ಲಿ ಶೇ.1.5ರಷ್ಟು ಏರಿಕೆ ಕಂಡು, 356.9ಕ್ಕೆ ತಲುಪಿದೆ ಎಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿದ ಅಧಿಕಾರಿಗಳು ತಿಳಿಸಿದ್ದಾರೆ.

ನಿರಂತರವಾಗಿ ಹಣದುಬ್ಬರ ದರ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ,ಅಗತ್ಯ ಅಹಾರ ವಸ್ತುಗಳ ದರಗಳನ್ನು ನಿಯಂತ್ರಿಸುವಂತೆ ಈಗಾಗಲೇ ವಿರೋಧ ಪಕ್ಷಗಳು ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸುತ್ತಿವೆ.

ದೇಶದ ಅಹಾರ ಹಣದುಬ್ಬರ ದರ ಈಗಾಗಲೇ ಶೇ.17ಕ್ಕೆ ತಲುಪಿದ್ದು, ಇಂಧನ ದರಗಳ ಏರಿಕೆಯಿಂದಾಗಿ, ಮತ್ತಷ್ಟು ಏರಿಕೆಯಾಗುವ ಸಾಧ್ಯತೆಗಳಿವೆ ಎಂದು ಮಾರುಕಟ್ಟೆ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ