ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 58 ಮಿಲಿಯನ್ ಉದ್ಯೋಗ ಸೃಷ್ಟಿಯ ಗುರಿ: ಖರ್ಗೆ (Government | 11th Five year plan| Stimulus packages | Lok Sabha | Mallikarjun Kharge)
Bookmark and Share Feedback Print
 
PTI
11ನೇ ಪಂಚವಾರ್ಷಿಕ ಯೋಜನೆಯಲ್ಲಿ (2007-12) ಸುಮಾರು 58 ಮಿಲಿಯನ್ ನೂತನ ಉದ್ಯೋಗಗಳನ್ನು ಸೃಷ್ಟಿಸುವ ಗುರಿಯನ್ನು ಹೊಂದಲಾಗಿದೆ ಎಂದು ಸಚಿವ ಮಲ್ಲಿಕಾರ್ಜುನ್ ಖರ್ಗೆ ತಿಳಿಸಿದ್ದಾರೆ.

ಕೈಗಾರಿಕೋದ್ಯಮ ಕ್ಷೇತ್ರಗಳ ಚೇತರಿಕೆಗಾಗಿ ಕೇಂದ್ರ ಸರಕಾರ ಸೂಕ್ತ ಆರ್ಥಿಕ ನೀತಿ ಹಾಗೂ ಮೂರು ಉತ್ತೇಜನ ಪ್ಯಾಕೇಜ್‌ಗಳನ್ನು ಘೋಷಿಸಿರುವುದಕ್ಕೆ ಕೇಂದ್ರ ಕಾರ್ಮಿಕ ಸಚಿವ ಮಲ್ಲಿಕಾರ್ಜುನ್ ಖರ್ಗೆ ಅಭಿನಂದಿಸಿದರು.

ಲೋಕಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾತನಾಡಿದ ಸಚಿವ ಖರ್ಗೆ,ವಾರ್ಷಿಕವಾಗಿ ಉದ್ಯೋಗ ಕ್ಷೇತ್ರದಲ್ಲಿ ಸರಾಸರಿ ಶೇ. 2.73ರಷ್ಟು ಏರಿಕೆಯಾಗುತ್ತಿದೆ ಎಂದು ಹೇಳಿದ್ದಾರೆ.

2009-10ರ ಏಪ್ರಿಲ್‌ನಿಂದ ಜನೆವರಿ ತಿಂಗಳ ಅವಧಿಯಲ್ಲಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣಾಭಿವೃದ್ಧಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ಕೇಂದ್ರ ಸರಕಾರ 27,368.76 ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಿದರು.

ಅದರಂತೆ, ಉದ್ಯೋಗ ಸೃಷ್ಟಿ ಯೋಜನೆಗಳಾದ ಸ್ವರ್ಣಜಯಂತಿ ಸ್ವರೋಜಗಾರ್ ಯೋಜನೆ ಮತ್ತು ಶಹರಿ ರೋಜಗಾರ್ ಯೋಜನೆಗಳಿಗಾಗಿ, ಸರಕಾರ ಇತರ ಕ್ಷೇತ್ರಗಳಿಂದ ಆರ್ಥಿಕ ನೆರವನ್ನು ನೀಡಲು ಯೋಜನೆಗಳನ್ನು ಹಮ್ಮಿಕೊಂಡಿದೆ ಎಂದು ತಿಳಿಸಿದ್ದಾರೆ.

ನಿರುದ್ಯೋಗಿಗಳಿಗೆ ಭತ್ಯೆ ನೀಡುವ ಯೋಜನೆ ಸರಕಾರದ ಬದ್ಧವಾಗಿದೆಯೇ ಎನ್ನುವ ಪ್ರಶ್ನೆಗೆ ಉತ್ತರಿಸಿದ ಸಚಿವ ಖರ್ಗೆ,ಸದ್ಯಕ್ಕೆ ಅಂತಹ ಯೋಜನೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಬಂಧಿತ ಮಾಹಿತಿ ಹುಡುಕಿ