ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಲೇಷಿಯನ್ ಏರ್‌ಲೈನ್ಸ್‌ನೊಂದಿಗೆ ಟಿಸಿಎಸ್ ಒಪ್ಪಂದ (TCS|Malaysia Airlines| Deal)
Bookmark and Share Feedback Print
 
ದೇಶದ ಬೃಹತ್ ಸಾಫ್ಟ್‌ವೇರ್ ರಫ್ತು ಸಂಸ್ಥೆಯಾದ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌(ಟಿಸಿಎಸ್)ಮಲೇಷಿಯಾ ಏರ್‌ಲೈನ್ಸ್‌ನೊಂದಿಗೆ ಐದು ವರ್ಷ ಅವಧಿಯ ಒಪ್ಪಂದ ಮಾಡಿಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮುಂಬರುವ ಐದು ವರ್ಷಗಳವರೆಗೆ ಟಿಸಿಎಸ್ ಕಂಪೆನಿ, ಮಲೇಷಿಯಾ ಏರ್‌ಲೈನ್ಸ್‌‌ಗೆ ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಸೇವೆಗಳು ಹಾಗೂ ಐಟಿ ಕಾರ್ಯಾಚರಣೆಗಳ ಸೇವೆಯನ್ನು ನೀಡಲಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

ಒಪ್ಪಂದದ ಮೊತ್ತದ ಬಗ್ಗೆ ಮಲೇಷಿಯಾ ಏರ್‌ಲೈನ್ಸ್‌ ಅಥವಾ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ ಕಂಪೆನಿಯಾಗಲಿ ಬಹಿರಂಗಪಡಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್‌ ಕಂಪೆನಿ, ಏರ್‌ಲೈನ್ಸ್‌ನ ಡಟಾ ಸೆಂಟರ್‌‌ಗಳ ಐಟಿ ಮೂಲಸೌಕರ್ಯ ವ್ಯವಸ್ಥಾಪನೆ ಹಾಗೂ ಐಟಿ ನೆಟ್ವರ್ಕ್ಸ್‌ ಮತ್ತು ಐಟಿ ಭಧ್ರತಾ ಸೇವೆಗಳನ್ನು ಒದಗಿಸಲಿದೆ ಎಂದು ಮಲೇಷಿಯಾ ಏರ್‌ಲೈನ್ಸ್‌ನ ಮುಖ್ಯ ವಾರ್ತಾಧಿಕಾರಿ ಫರಿದಾ ಅಬ್ದುಲ್ ರೆಹಮಾನ್ ತಿಳಿಸಿದ್ದಾರೆ.

ಮಲೇಷಿಯಾ ಏರ್‌ಲೈನ್ಸ್‌ನೊಂದಿಗಿನ ಒಪ್ಪಂದ ಸಂತಸ ತಂದಿದೆ. ಮುಂಬರುವ ದಿನಗಳಲ್ಲಿ ಜಾಗತಿಕ ವೈಮಾನಿಕ ಕ್ಷೇತ್ರದಲ್ಲಿ ಹೆಚ್ಚಿನ ವಹಿವಾಟಿಗೆ ನಾಂದಿಯಾಗಲಿದೆ ಎಂದು ಏಷ್ಯಾ ಫೆಸಿಫಿಕ್‌ನ ಟಿಸಿಎಸ್ ಮುಖ್ಯಸ್ಥ ವಿಶ್ ಐಯ್ಯರ್ ಹೇಳಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ