ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 100 ಮಿನ್‌ ಗ್ರಾಹಕರ ಗುರಿ ತಲುಪಿದ ರಿಲಯನ್ಸ್ (Ambani|RCom|Reliance Communication|Subscribers)
Bookmark and Share Feedback Print
 
ರಿಲಯನ್ಸ್ ಕಮ್ಯೂನಿಕೇಶನ್ಸ್ ಟೆಲಿಕಾಂ ಸಂಸ್ಥೆ 100 ಮಿಲಿಯನ್ ಗ್ರಾಹಕರ ಗುರಿಯನ್ನು ತಲುಪಿದ್ದು, ದೇಶದ ಎರಡನೇ ಬೃಹತ್ ಟೆಲಿಕಾಂ ಕಂಪೆನಿಯಾಗಿ ಹೊರಹೊಮ್ಮಿದೆ.

ಜಾಗತಿಕ ಮಟ್ಟದಲ್ಲಿ ರಿಲಯನ್ಸ್ ಕಮ್ಯೂನಿಕೇಶನ್ಸ್ ನಾಲ್ಕನೇ ಸ್ಥಾನವನ್ನು ಪಡೆದಿದ್ದು, ಮುಂಬರುವ 1000 ದಿನಗಳಲ್ಲಿ 200 ಮಿಲಿಯನ್ ಗ್ರಾಹಕರನ್ನು ತಲುಪುವ ಗುರಿಯನ್ನು ಹೊಂದಲಾಗಿದೆ ಎಂದು ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

2009, ಮೇ 15 ರಂದು ಭಾರ್ತಿಏರ್‌ಟೆಲ್ ಸಂಸ್ಥೆ 100 ಮಿಲಿಯನ್ ಗ್ರಾಹಕರ ಗುರಿಯನ್ನು ತಲುಪಿ, ಭಾರತದ ಮೂರನೇ ಬೃಹತ್ ಟೆಲಿಕಾಂ ಕಂಪೆನಿಯಾಗಿದೆ ಎಂದು ವಕ್ತಾರರು ವಿವರಣೆ ನೀಡಿದ್ದಾರೆ.

ಇತ್ತೀಚಿನ ವರದಿಗಳ ಪ್ರಕಾರ ಭಾರ್ತಿಏರ್‌ಟೆಲ್ ಸಂಸ್ಥೆ 121.71 ಮಿಲಿಯನ್ ಗ್ರಾಹಕರನ್ನು ಹೊಂದಿದೆ. ರಿಲಯನ್ಸ್ ಕಮ್ಯೂನಿಕೇಶನ್ಸ್ 96.59 ಮಿಲಿಯನ್, ವೊಡಾಫೋನ್ 94.14 ಮಿಲಿಯನ್ ,ಬಿಎಸ್‌ಎನ್‌ಎಲ್ 65.10 ಮಿಲಿಯನ್, ಟಾಟಾ ಕಮ್ಯೂನಿಕೇಶನ್ಸ್ 60.31 ಮಿಲಿಯನ್, ಐಡಿಯಾ 59.88 ಮಿಲಿಯನ್ ಗ್ರಾಹಕರನ್ನು ಹೊಂದಿದೆ.
ಸಂಬಂಧಿತ ಮಾಹಿತಿ ಹುಡುಕಿ