ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ವಿಮಾನ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ (Passenger| Air traffic)
Bookmark and Share Feedback Print
 
ದೇಶಿಯ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ನಿರಂತರ ಏರಿಕೆ ಕಾಣುತ್ತಿದೆ.ಕಳೆದ ವರ್ಷದ ಫೆಬ್ರವರಿ ತಿಂಗಳ ಅವಧಿಗೆ ಹೋಲಿಸಿದಲ್ಲಿ ಶೇ.15.6ರಷ್ಟು ಏರಿಕೆಯಾಗಿದ್ದು, 39.15 ಲಕ್ಷ ಪ್ರಯಾಣಿಕರು ಸಂಚರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷದ ಜನೆವಲ್ಲಿ ತಿಂಗಳ ಅವಧಿಯಲ್ಲಿ 40.87 ಲಕ್ಷ ಪ್ರಯಾಣಿಕರು ವಿಮಾನಯಾನ ಕೈಗೊಂಡಿದ್ದರು. ಫೆಬ್ರವರಿ ತಿಂಗಳ ಅವಧಿಯಲ್ಲಿ 33.85 ಲಕ್ಷ ಪ್ರಯಾಣಿಕರ ಸಂಖ್ಯೆಯಲ್ಲಿ ಅಲ್ಪಮಟ್ಟಿಗೆ ಕುಸಿತ ಕಂಡಿದೆ ಎಂದು ಸೆಂಟರ್ ಫಾರ್ ಏಷ್ಯಾ ಫೆಸಿಫಿಕ್ ಅವಿಯೇಶನ್‌ ಸಿಎಪಿಎ ಸಂಸ್ಥೆಯ ಮುಖ್ಯಸ್ಥ ಕಪಿಲ್ ಕೌಲ್ ತಿಳಿಸಿದ್ದಾರೆ.

ನರೇಶ್ ಗೋಯಲ್ ಮಲೀಕತ್ವದ ಜೆಟ್-ಜೆಟ್ ಲೈಟ್ ವಿಮಾನಯಾನ ಸಂಸ್ಥೆ ಶೇ.26.1ರಷ್ಟು ಹಾಗೂ ವಿಜಯ್ ಮಲ್ಯ ಮಾಲೀಕತ್ವದ ಕಿಂಗ್‌ಫಿಶರ್ ಶೇ. 22.7ರಷ್ಟು , ಏರ್‌ ಇಂಡಿಯಾ ಸಂಸ್ಥೆ ಶೇ.17ರಷ್ಟು ಪ್ರಯಾಣಿಕರ ಪಾಲನ್ನು ಹೊಂದಿವೆ.

ದೇಶದ ನಾಲ್ಕು ಮೆಟ್ರೋ ನಗರಗಳ ವಿಮಾನಯಾನ ಪ್ರಯಾಣಿಕರ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗಿದೆ. ಮುಂಬರುವ ದಿನಗಳಲ್ಲಿ ವಿಮಾನಯಾನ ಸಂಸ್ಥೆಗಳು ಆರ್ಥಿಕವಾಗಿ ಲಾಭದಾಯಕವಾಗುವ ಸಾಧ್ಯತೆಗಳಿವೆ ಎಂದು ವೈಮಾನಿಕ ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ
ಇದನ್ನು ಸಹ ಶೋಧಿಸು: ವಿಮಾನಯಾನ, ಪ್ರಯಾಣಿಕ, ಸಿಎಪಿಎ