ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಸ್ಪೆಕ್ಟ್ರಂ:ಏರ್‌ಸೆಲ್‌ ಬಿಡ್ ಸಲ್ಲಿಕೆಗೆ ಸಿದ್ಧತೆ (Aircel Ltd | 3G auction | wireless broadband services)
Bookmark and Share Feedback Print
 
3ಜಿ ತರಂಗಾಂತರ ಹರಾಜಿಗಾಗಿ ಬಿಡ್ ಸಲ್ಲಿಸಲು ಏರ್‌ಸೆಲ್‌ ಸಂಸ್ಥೆ ನಿರ್ಧರಿಸಿದೆ ಎಂದು ಕಂಪೆನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಗುರುದೀಪ್ ಸಿಂಗ್ ಹೇಳಿದ್ದಾರೆ.

ಕೇಂದ್ರ ಸರಕಾರ ಏಪ್ರಿಲ್‌ 9 ರಂದು 3ಜಿ ತರಂಗಾಂತರಗಳ ಬಿಡ್‌‌ದಾರರನ್ನು ಘೋಷಿಸಲಿದೆ ಎಂದು ಟೆಲಿಕಾಂ ಅಧಿಕಾರಿಗಳು ತಿಳಿಸಿದ್ದಾರೆ.
ಏರ್‌ಸೆಲ್ ಕಂಪೆನಿ ಶೀಘ್ರದಲ್ಲಿ ಬಿಡ್ ಸಲ್ಲಿಸಲಿದೆ ಎಂದು ಸಿಂಗ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

3ಜಿ ತರಂಗಾಂತರಗಳಿಗಾಗಿ ಅಗತ್ಯವಾದ ಆರ್ಥಿಕ ನೆರವನ್ನು ನೀಡಲು ಮಲೇಷಿಯಾದ ಮ್ಯಾಕ್ಸಿಸ್ ಕಮ್ಯೂನಿಕೇಶನ್ಸ್‌ನೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ ಎಂದು ಸಿಂಗ್ ವಿವರಣೆ ನೀಡಿದ್ದಾರೆ.

ದೇಶದ 18 ವಲಯಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಟೆಲಿಕಾಂ ಸಂಸ್ಥೆ ಏರ್‌ಸೆಲ್, ಮುಂಬರುವ ಜೂನ್ ವೇಳೆಗೆ ಐದು ವಲಯಗಳನ್ನು ವಿಸ್ತರಿಸುವ ನಿರೀಕ್ಷೆಯಿದೆ ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ