ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮುಂಗಡ ಆದಾಯ ತೆರಿಗೆ ಪಾವತಿ:ಎಸ್‌ಬಿಐಗೆ ಅಗ್ರಸ್ಥಾನ (Stat Bank of India | Advance taxpayers | Income Tax | LIC)
Bookmark and Share Feedback Print
 
ದೇಶದ ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೇಟ್‌ ಬ್ಯಾಂಕ್ ಆಫ್ ಇಂಡಿಯಾ, 6,552 ಕೋಟಿ ರೂಪಾಯಿಗಳ ಮುಂಗಡ ಆದಾಯ ತೆರಿಗೆಯನ್ನು ಪಾವತಿಸಿ ಟಾಪ್ 10ರಲ್ಲಿ ಅಗ್ರಸ್ಥಾನ ಪಡೆದಿದೆ ಎಂದು ಆದಾಯ ತೆರಿಗೆ ಮೂಲಗಳು ತಿಳಿಸಿವೆ.

ಸರಕಾರಿ ಸ್ವಾಮ್ಯದ ಎಲ್‌ಐಸಿ , ಇಂಡಿಯನ್ ಆಯಿಲ್ ಮತ್ತು ಬ್ಯಾಂಕ್ ಆಫ್ ಬರೋಡಾ ನಂತರದ ಸ್ಥಾನಗಳು ಪಡೆದಿವೆ.

ಕಳೆದ ವರ್ಷದ ಅವಧಿಯಲ್ಲಿ 5,733 ಕೋಟಿ ರೂಪಾಯಿಗಳನ್ನು ಪಾವತಿಸಿದ್ದ ಎಸ್‌ಬಿಐ,ಪ್ರಸಕ್ತ ವರ್ಷದ ಅವಧಿಯಲ್ಲಿ 6,552 ಕೋಟಿ ರೂಪಾಯಿಗಳ ಮುಂಗಡ ತೆರಿಗೆಯನ್ನು ಪಾವತಿಸಿದೆ. ಖಾಸಗಿ ಕ್ಷೇತ್ರದಲ್ಲಿ ಮುಕೇಶ್ ಅಂಬಾನಿ ನೇತೃತ್ವದ ರಿಲಯನ್ಸ್ ಇಂಡಸ್ಟ್ರೀಸ್ 3,075 ಕೋಟಿ ರೂಪಾಯಿಗಳ ಮುಂಗಡ ತೆರಿಗೆಯನ್ನು ಪಾವತಿಸಿ ಅಗ್ರಸ್ಥಾನದಲ್ಲಿದೆ.

ಸ್ಟ್ಯಾಂಡರ್ಡ್ ಚಾರ್ಟರ್ಡ್ ಬ್ಯಾಂಕ್ ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ಗಳು ಮುಂಗಡ ತೆರಿಗೆ ಪಾವತಿಯಲ್ಲಿ ಕ್ರಮವಾಗಿ ಐದನೇ ಮತ್ತು ಆರನೇ ಸ್ಥಾನವನ್ನು ಪಡೆದಿವೆ.

ನಾಲ್ಕನೇ ತ್ರೈಮಾಸಿಕ ಅವಧಿಯಲ್ಲಿ ಎಸ್‌ಬಿಐ ಬ್ಯಾಂಕ್ 1,857 ಕೋಟಿ ರೂಪಾಯಿಗಳನ್ನು ಪಾವತಿಸಿತ್ತು. ಎಲ್‌ಐಸಿ ಸಂಸ್ಥೆ 864 ಕೋಟಿ ರೂಪಾಯಿಗಳನ್ನು ಪಾವತಿಸಿತ್ತು ಎಂದು ತೆರಿಗೆ ಅಧಿಕಾರಿಗಳು ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ