ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಎಲ್‌ಆಂಡ್‌ಟಿ ಕಂಪೆನಿಗೆ 1000ಕೋಟಿ ರೂ. ಗುತ್ತಿಗೆ (Larsen & Toubro| Engineering | ONGC | BSE)
Bookmark and Share Feedback Print
 
ದೇಶದ ಇಂಜಿನಿಯರಿಂಗ್ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಲಾರ್ಸನ್‌ ಆಂಡ್ ಟೌಬ್ರೋ, ಆಯಿಲ್ ಆಂಡ್ ನ್ಯಾಚುರಲ್ ಗ್ಯಾಸ್ ಕಾರ್ಪೋರೇಶನ್ ಕಂಪೆನಿಯಿಂದ 1,013 ಕೋಟಿ ರೂಪಾಯಿಗಳ ಗುತ್ತಿಗೆಯನ್ನು ಪಡೆದುಕೊಂಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮುಂಬೈ ಹೈ ನಾರ್ಥ್ ರಿ-ಡೆವಲೆಪ್‌ಮೆಂಟ್ ಯೋಜನೆಯ ಕಾಮಗಾರಿಗಾಗಿ ಗುತ್ತಿಗೆಯನ್ನು ಪಡೆದುಕೊಳ್ಳಲಾಗಿದೆ ಎಂದು ಎಲ್‌ ಆಂಡ್ ಟಿ ಕಂಪೆನಿ, ಮುಂಬೈ ಶೇರುಪೇಟೆಗೆ ಸಲ್ಲಿಸಿದ ಮಾಹಿತಿಯಲ್ಲಿ ಬಹಿರಂಗಪಡಿಸಿದೆ.

ಕಾಮಗಾರಿಗೆ ಕಟ್ಟಡ ನಿರ್ಮಾಣ,ಸಂಗ್ರಹಣೆ ಮತ್ತು ಸ್ಥಾವರಗಳ ನಿರ್ಮಾಣ ಕಾರ್ಯದ ಹೊಣೆಯನ್ನು ಹೊತ್ತುಕೊಂಡಿದೆ ಎಂದು ಮುಂಬೈ ಶೇರುಪೇಟೆಗೆ ಮಾಹಿತಿ ಸಲ್ಲಿಸಿದೆ.

ಮುಂಬೈ ಹೈ ಫೀಲ್ಡ್ ಕಳೆದ 1974ರಿಂದ ಕಾರ್ಯನಿರ್ವಹಿಸುತ್ತಿದ್ದು, ಒಎನ್‌ಜಿಸಿ ಉತ್ಪಾದನೆ ಹೆಚ್ಚಳಕ್ಕಾಗಿ ಹಲವಾರು ಯೋಜನೆಗಳನ್ನು ಆರಂಭಿಸಲು ಗುತ್ತಿಗೆಯನ್ನು ನೀಡಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಮುಂಬೈ ಶೇರುಪೇಟೆಯಲ್ಲಿ ಎಲ್‌ ಆಂಡ್ ಟಿ ಶೇರುಗಳು ಶೇ.1.55ರಷ್ಟು ಏರಿಕೆಯಾಗಿ 1,622.50 ರೂಪಾಯಿಗಳಿಗೆ ತಲುಪಿದೆ.
ಸಂಬಂಧಿತ ಮಾಹಿತಿ ಹುಡುಕಿ