ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಆರ್‌ಬಿಐ ನೀತಿಗಳಲ್ಲಿ ನಿಧಾನ ಬದಲಾವಣೆ ಅಗತ್ಯ (RBI| Ahluwalia | Reserve Bank of India | Planning Commission)
Bookmark and Share Feedback Print
 
ಹಣದುಬ್ಬರ ದರ ನಿರಂತರ ಏರಿಕೆ ಕಾಣುತ್ತಿರುವ ಹಿನ್ನೆಲೆಯಲ್ಲಿ ,ಆರ್ಥಿಕತೆ ಸಾಮಾನ್ಯ ಸ್ಥಿತಿಗೆ ಬರುವಂತೆ ಭಾರತೀಯ ರಿಸರ್ವ್ ಬ್ಯಾಂಕ್ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್ ಸಿಂಗ್ ಆಹ್ಲುವಾಲಿಯಾ ಹೇಳಿದ್ದಾರೆ.

ಉತ್ತೇಜನ ಪ್ಯಾಕೇಜ್‌ಗಳನ್ನು ಹಿಂಪಡೆಯುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್, ಏಪ್ರಿಲ್ ತಿಂಗಳ ಆರ್ಥಿಕ ಪರಿಷ್ಕರಣ ಅವಧಿಯಲ್ಲಿ ರೆಪೋ ದರಗಳಲ್ಲಿ 25ರಿಂದ 50 ಬೇಸಿಸ್ ಪಾಯಿಂಟ್‌ಗಳನ್ನು ಏರಿಕೆ ಮಾಡುವ ಸಾಧ್ಯತೆಗಳಿವೆ ಎಂದು ಮೊಂಟೆಕ್ ಆತಂಕ ವ್ಯಕ್ತಪಡಿಸಿದ್ದಾರೆ.

ಹಣದುಬ್ಬರದ ನಿರಂತರ ಏರಿಕೆ ಜನಸಾಮಾನ್ಯರಲ್ಲಿ ಆತಂಕ ಮೂಡಿಸಿದೆ.ಸಾಮಾನ್ಯ ಸ್ಥಿತಿಗೆ ಸಂಪೂರ್ಣವಾಗಿ ಮರಳಿದ್ದೇವೆ ಎನ್ನುವ ಆತ್ಮವಿಶ್ವಾಸ ಮಿತಿ ಮೀರಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ಗಾರೆ.

ಭಾರತದ ವಾರ್ಷಿಕ ಸಗಟು ಸೂಚ್ಯಂಕ ಹಣದುಬ್ಬರ ದರ ಫೆಬ್ರವರಿ ತಿಂಗಳ ಅವದಿಯಲ್ಲಿ ಶೇ.9.89ಕ್ಕೆ ತಲುಪಿದೆ.ಮಾರ್ಚ್ ತಿಂಗಳ ಅವಧಿಯಲ್ಲಿ ಹಣದುಬ್ಬರ ದರ ಶೇ.10ಕ್ಕೆ ತಲುಪುವ ನಿರೀಕ್ಷೆಯಿದೆ ಎಂದು ತಿಳಿಸಿದ್ದಾರೆ.

ಭಾರತದ ಆರ್ಥಿಕತೆ ಮಾರ್ಚ್ 2010ರ ವೇಳೆಗೆ ಶೇ.7.2ಕ್ಕೆ ತಲುಪುವ ನಿರೀಕ್ಷೆಯಿದ್ದು,ನಂತರದ ವರ್ಷದಲ್ಲಿ ಶೇ.8.5ರಷ್ಟು ಹಾಗೂ 2011-12ರ ವೇಳೆಗೆ ಶೇ.9ಕ್ಕೆ ತಲುಪಲಿದೆ ಎಂದು ಮೊಂಟೆಕ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ