ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಟಿಸಿಎಸ್‌ನಿಂದ 30,ಸಾವಿರ ಉದ್ಯೋಗಿಗಳ ನೇಮಕ (IT|Tata Consultancy Services|Recruitment)
Bookmark and Share Feedback Print
 
ದೇಶದ ಸಾಫ್ಟ್‌‌ವೇರ್ ರಫ್ತು ಸೇವಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಟಾಟಾ ಕನ್ಸಲ್‌ಟನ್ಸಿ ಸರ್ವಿಸಸ್, ಮುಂದಿನ ಆರ್ಥಿಕ ವರ್ಷದ ಅವಧಿಯೊಳಗೆ 30 ಸಾವಿರ ಉದ್ಯೋಗಿಗಳನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

ಕಳೆದ ಎರಡು ತ್ರೈಮಾಸಿಕ ಅವಧಿಗಳಲ್ಲಿ ವಹಿವಾಟಿನಲ್ಲಿ ಭಾರಿ ಚೇತರಿಕೆ ಕಂಡಿದ್ದು,ಮುಂದಿನ ವರ್ಷಗಳಲ್ಲಿ ಕೂಡಾ ಚೇತರಿಕೆಯ ವಹಿವಾಟು ಮುಂದುವರಿಯಲಿದೆ ಎಂದು ಟಿಸಿಎಸ್ ಕಂಪೆನಿಯ ಕಾರ್ಯಕಾರಿ ನಿರ್ದೇಶಕ ಹಾಗೂ ಆರ್ಥಿಕ ವಿಭಾಗದ ಅಧಿಕಾರಿ ಎಸ್. ಮಹಾಲಿಂಗಂ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಉದ್ಯೋಗಿಗಳ ವೇತನದಲ್ಲಿ ಮುಂದಿನ ತಿಂಗಳಿನ ಅವಧಿಯಲ್ಲಿ ಹೆಚ್ಚಳವಾಗಲಿದ್ದು, ಆದರೆ ಎಷ್ಟರ ಮಟ್ಟಿಗೆ ಹೆಚ್ಚಳವಾಗಲಿದೆ ಎಂದು ಹೇಳಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಆದರೆ, ಮಾರುಕಟ್ಟೆಗಳ ಆರ್ಥಿಕ ಸ್ಥಿತಿಗತಿ ಹಾಗೂ ಸಾಫ್ಟ್‌ವೇರ್ ಉದ್ಯಮದ ಚೇತರಿಕೆಯ ವಹಿವಾಟು ಗಮನದಲ್ಲಿಟ್ಟುಕೊಂಡು ಉದ್ಯೋಗಿಗಳ ವೇತನದಲ್ಲಿ ಹೆಚ್ಚಳಗೊಳಿಸಲಾಗುವುದು ಎಂದು ಟಿಸಿಎಸ್ ಕಾರ್ಯಕಾರಿ ನಿರ್ದೇಶಕ ಮಹಾಲಿಂಗಂ ತಿಳಿಸಿದ್ದಾರೆ.
ಸಂಬಂಧಿತ ಮಾಹಿತಿ ಹುಡುಕಿ