ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಹೀಂದ್ರಾ ಮೈತ್ರಿ ಅಭಾದಿತ:ರೆನೌಲ್ಟ್ (Mahindra and Mahindra | Renault | Alliance | French auto maker)
Bookmark and Share Feedback Print
 
ದೇಶದ ಪ್ರಮುಖ ವಾಹನೋದ್ಯಮ ತಯಾರಿಕೆ ಸಂಸ್ಥೆಯಾದ ಮಹೀಂದ್ರಾ ಆಂಡ್ ಮಹೀಂದ್ರಾ ಕಂಪೆನಿಯೊಂದಿಗೆ ಮೈತ್ರಿ ಮುಂದುವರಿಸಲಾಗುವುದು.ಏಳು ಸೀಟುಗಳುಳ್ಳ ಬಹುಪಯೋಗಿ ಪ್ರಯಾಣಿಕರ ಕಾರನ್ನು ಮಾರುಕಟ್ಟೆಗೆ ಬಿಡುಗಡೆ ಬಿಡುಗಡೆ ಮಾಡಲಾಗುವುದು ಎಂದು ಫ್ರೆಂಚ್ ವಾಹನೋದ್ಯಮ ತಯಾರಿಕೆ ಸಂಸ್ಥೆ ರೆನೌಲ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಮಹೀಂದ್ರಾ ಕಂಪೆನಿಯೊಂದಿಗೆ ಮುಂದುವರಿಯಲಿದ್ದೇವೆ ಎಂದು ರೆನೌಲ್ಟ್ ಇಂಡಿಯಾದ ಪ್ರಧಾನ ವ್ಯವಸ್ಥಾಪಕ ಮಾರ್ಕ್ ನಾಸ್ಸಿಫ್ ಸ್ಪಷ್ಟಪಡಿಸಿದ್ದಾರೆ.

ಉಭಯ ಕಂಪೆನಿಗಳ ಮೈತ್ರಿಯನ್ನು ಮುಂದುವರಿಸುವ ನಿಟ್ಟಿನಲ್ಲಿ ಯೋಜನೆಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಜಂಟಿ ಸಹಭಾಗಿತ್ವದ ಯೋಜನಾ ವಿಸ್ತರಣೆಗಳ ಬಗ್ಗೆ ಮಾಧ್ಯಮಗಳಿಗೆ ಸಂಪೂರ್ಣ ಮಾಹಿತಿಯನ್ನು ಒದಗಿಸಲಾಗುವುದು ಎಂದು ತಿಳಿಸಿದ್ದಾರೆ.

ರೆನೌಲ್ಟ್ ಸಂಸ್ಥೆ ಶೇ.49ರಷ್ಟು ಪಾಲನ್ನು ಹೊಂದಿದ್ದು ಮತ್ತು ಮಹೀಂದ್ರಾ ಸಂಸ್ಥೆ ಶೇ.51ರಷ್ಟು ಪಾಲನ್ನು ಹೊಂದಿದೆ.ಶೀಘ್ರದಲ್ಲಿ ಲೊಗಾನ್ ಸೆಡಾನ್ ಮಾಡೆಲ್ ವಾಹನವನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸಲಾಗುವುದು ಎಂದು ಮೂಲಗಳು ತಿಳಿಸಿವೆ.
ಸಂಬಂಧಿತ ಮಾಹಿತಿ ಹುಡುಕಿ