ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಭಾರತದ ಆರ್ಥಿಕತೆ ಶೇ.8ಕ್ಕೆ ತಲುಪಲಿದೆ:ಐಎಂಎಫ್ (IMF | Economy | Inflation | Rising fiscal)
Bookmark and Share Feedback Print
 
ಭಾರತದ ಆರ್ಥಿಕ ವೃದ್ಧಿ ದರ ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ಶೇ.8ಕ್ಕೆ ತಲುಪುವ ನಿರೀಕ್ಷೆಯಿದ್ದು,ಹಣದುಬ್ಬರ ಕಳವಳ ಮುಂದುವರಿಯುವ ಸಾಧ್ಯತೆಗಳಿವೆ ಎಂದು ಅಂತಾರಾಷ್ಟ್ರೀಯ ಹಣಕಾಸು ನಿಧಿ ಸಂಸ್ಥೆ ಹೇಳಿಕೆ ನೀಡಿದೆ.

ಭಾರತದ ದೀರ್ಘಾವಧಿ ಆರ್ಥಿಕತೆ ಸುಭದ್ರವಾಗಿದ್ದು, ಖಾಸಗಿ ಕ್ಷೇತ್ರಗಳ ವಹಿವಾಟಿನಲ್ಲಿ ಚೇತರಿಕೆಯಾಗಲಿದೆ. ಮುಂಬರುವ 2010- 11ರವರೆಗೆ ಆರ್ಥಿಕತೆ ಸುಸ್ಥಿತಿಗೆ ಬರಲಿದೆ ಎಂದು ಐಎಂಎಪ್ ವಿಶ್ವಾಸ ವ್ಯಕ್ತಪಡಿಸಿದೆ.

ಪ್ರಸಕ್ತ ವರ್ಷದ ಆರ್ಥಿಕ ಸಾಲಿನಲ್ಲಿ ದೇಶದ ಜಿಡಿಪಿ ದರ ಶೇ.6.7ಕ್ಕೆ ತಲುಪುವ ವಿಶ್ವಾಸವಿದೆ. ಆದರೆ ಕೇಂದ್ರದ ಲೆಕ್ಕಪರಿಶೋಧಕ ಸಂಸ್ಥೆ ಶೇ.7.2ರಷ್ಟಾಗಲಿದೆ ಎಂದು ಸಮೀಕ್ಷಾ ಅಧ್ಯಯನ ವರದಿಯಲ್ಲಿ ಪ್ರಕಟಿಸಿದೆ.

ಹಣದುಬ್ಬರ ಮತ್ತು ಆರ್ಥಿಕ ವೃದ್ಧಿ ದರ ಸಮಸ್ಯೆ ಕಳವಳಗಳು ಮುಂದುವರಿಯಲಿವೆ. ಆದರೆ ಮುಂದಿನ ವರ್ಷಾಂತ್ಯಕ್ಕೆ ದೇಶದ ಆರ್ಥಿಕತೆಯಲ್ಲಿ ವೇಗದ ಚೇತರಿಕೆ ಕಾಣಲಿದೆ ಎಂದು ಐಎಂಎಫ್ ಪ್ರಕಟಿಸಿದೆ.

ಸಗಟು ಸೂಚ್ಯಂಕ ಹಣದುಬ್ಬರ ದರ ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.9.89ಕ್ಕೆ ತಲುಪಿದೆ.ಆರ್‌ಬಿಐ, ಹಣದುಬ್ಬರ ದರ ಶೇ.8.5ಕ್ಕೆ ತಲುಪಲಿದೆ ಎಂದು ಅಧ್ಯಯನ ವರದಿಯಲ್ಲಿ ಬಹಿರಂಗಪಡಿಸಿದೆ.
ಸಂಬಂಧಿತ ಮಾಹಿತಿ ಹುಡುಕಿ