ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಮಹಾರತ್ನ ದರ್ಜೆಗೆ ಸೇಲ್,ಎನ್‌ಟಿಪಿಸಿ ಮನವಿ (SAIL | NTPC | ONGC | IOC | Maharatna status | Government)
Bookmark and Share Feedback Print
 
ಸರಕಾರಿ ಸ್ವಾಮ್ಯದ ಸೇಲ್ ಮತ್ತು ಎನ್‌ಟಿಪಿಸಿ ಸಂಸ್ಥೆಗಳು ಸರಕಾರಕ್ಕೆ ಮನವಿಯನ್ನು ಸಲ್ಲಿಸಿ, ಆರ್ಥಿಕತೆಗೆ ಹೆಚ್ಚಿನ ಸ್ವಾಯತ್ತತೆ ನೀಡುವ ಮಹಾರತ್ನ ಗೌರವ ನೀಡುವಂತೆ ಮನವಿ ಸಲ್ಲಿಸಿವೆ ಎಂದು ಮೂಲಗಳು ತಿಳಿಸಿವೆ.

ಸೇಲ್ ಮತ್ತು ಎನ್‌ಟಿಪಿಸಿ ಸಂಸ್ಥೆಗಳು ಸಲ್ಲಿಸಿದ ಪ್ರಸ್ತಾವನೆಯನ್ನು ಸ್ವೀಕರಿಸಲಾಗಿದ್ದು,ಪ್ರಸ್ತಾವನೆಯನ್ನು ಸಚಿವ ಸಂಪುಟ ಸಮಿತಿಗೆ 15 ದಿನಗಳೊಳಗಾಗಿ ಕಳುಹಿಲಾಗುವುದು ಎಂದು ಸಂಬಂಧಿತ ಇಲಾಖೆಯ ಕಾರ್ಯದರ್ಶಿ ಭಾಸ್ಕರ್ ಚಟರ್ಜಿ ಹೇಳಿದ್ದಾರೆ.

ಇತರ ಸರಕಾರಿ ಸ್ವಾಮ್ಯದ ಒಎನ್‌ಜಿಸಿ ಮತ್ತು ಇಂಡಿಯನ್ ಆಯಿಲ್ ಕಾರ್ಪೋರೇಶನ್(ಐಒಸಿ) ಕಂಪೆನಿಗಳಿಂದ ಕೂಡಾ ಪ್ರಸ್ತಾವನೆಯನ್ನು ನಿರೀಕ್ಷಿಸಲಾಗುತ್ತಿದೆ ಎಂದು ಚಟರ್ಜಿ ತಿಳಿಸಿದ್ದಾರೆ.

ಸರಕಾರಿ ಸ್ವಾಮ್ಯದ ಕಂಪೆನಿಗಳಿಗೆ ಮಹಾರತ್ನ ದರ್ಜೆಯನ್ನು ನೀಡುವ ಕುರಿತಂತೆ 2009ರ ಡಿಸೆಂಬರ್ ತಿಂಗಳ ಅವದಿಯಲ್ಲಿ ಸಂಪುಟ ಮಂಜೂರಾತಿ ನೀಡಿ, ಕೆಲ ನಿಯಮಗಳನ್ನು ಜಾರಿಗೆ ತಂದಿದೆ.

ಮಹಾರತ್ನ ದರ್ಜೆಯನ್ನು ಪಡೆಯಲು ಕಂಪೆನಿಗಳು ವಾರ್ಷಿಕವಾಗಿ 5 ಸಾವಿರ ಕೋಟಿ ರೂಪಾಯಿ ನಿವ್ವಳ ಲಾಭ ಪಡೆದಿರಬೇಕು.ನಿವ್ವಳ ಆಸ್ತಿ 15 ಸಾವಿರ ಕೋಟಿ ರೂಪಾಯಿ ಹೊಂದಿರಬೇಕು.ವಾರ್ಷಿಕ ವಹಿವಾಟು 25 ಸಾವಿರ ಕೋಟಿ ರೂಪಾಯಿ ಮೀರಿರಬೇಕು ಎಂದು ಸರಕಾರ ನಿಯಮಗಳನ್ನು ರೂಪಿಸಿದೆ.

ಸರಕಾರದ ನಿಯಮಗಳಿಗೆ ಸೇಲ್, ಒಎನ್‌ಜಿಸಿ, ಎನ್‌ಟಿಪಿಸಿ ಮತ್ತು ಐಒಸಿ ಸೇರಿದಂತೆ ಕೇವಲ ನಾಲ್ಕು ಕಂಪೆನಿಗಳು ಮಾತ್ರ ಮಹಾರತ್ನ ದರ್ಜೆ ಪಡೆಯುವ ಅರ್ಹತೆಯನ್ನು ಪಡೆದಿವೆ.
ಸಂಬಂಧಿತ ಮಾಹಿತಿ ಹುಡುಕಿ