ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » 3ಜಿ ಸ್ಪೆಕ್ಟ್ರಂ:ಭಾರ್ತಿಏರ್‌ಟೆಲ್‌ನಿಂದ ಬಿಡ್ ಸಲ್ಲಿಕೆ (Bharti Airtel | Bids | 3G spectrum | private telecom)
Bookmark and Share Feedback Print
 
ದೇಶದ ಖಾಸಗಿ ಟೆಲಿಕಾಂ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಭಾರ್ತಿ ಏರ್‌ಟೆಲ್ ಸಂಸ್ಥೆ, ಏಪ್ರಿಲ್ 9 ರಂದು ಆರಂಭವಾಗಲಿರುವ 3ಜಿ ತರಂಗಾಂತರಗಳ ಹರಾಜಿಗಾಗಿ ಬಿಡ್ ಸಲ್ಲಿಸಲಿದೆ ಎಂದು ಕಂಪೆನಿಯ ಮೂಲಗಳು ತಿಳಿಸಿವೆ.

3ಜಿ ಸ್ಪೆಕ್ಟ್ರಂ ಹರಾಜಿಗೆ ಬಿಡ್ ಸಲ್ಲಿಸಲು ನಾಳೆ ಅಂತಿಮ ದಿನವಾಗಿದೆ ಎಂದು ಟೆಲಿಕಾಂ ಸಚಿವಾಲಯದ ಮೂಲಗಳು ತಿಳಿಸಿವೆ.

ಕೇಂದ್ರ ಸರಕಾರ ಕೆಲ ರಾಜ್ಯಗಳಲ್ಲಿ ನಾಲ್ಕು ಸ್ಲಾಟ್‌ಗಳ ಹಂಚಿಕೆ ಹಾಗೂ ಇತರ ರಾಜ್ಯಗಳಲ್ಲಿ ಮೂರು ಸ್ಲಾಟ್‌ಗಳ ಹಂಚಿಕೆ ಮಾಡಲಿದೆ.3ಜಿ ಸ್ಪೆಕ್ಟ್ರಂಗಾಗಿ ಸರಕಾರ 3500 ಕೋಟಿ ರೂಪಾಯಿಗಳ ಮೀಸಲು ದರವನ್ನು ನಿಗದಿಪಡಿಸಿದೆ.

ಪಂಜಾಬ್,ಬಿಹಾರ್, ಪಶ್ಚಿಮ ಬಂಗಾಳ, ಹಿಮಾಚಲ್ ಪ್ರದೇಶ ಮತ್ತು ಜಮ್ಮು ಕಾಶ್ಮಿರ ರಾಜ್ಯಗಳಲ್ಲಿ ನಾಲ್ಕು ಕಂಪೆನಿಗಳು 3ಜಿ ಸ್ಪೆಕ್ಟ್ರಂ ಹಂಚಿಕೆ ಪಡೆಯಬಹುದಾಗಿದೆ.ಇತರ ರಾಜ್ಯಗಳಲ್ಲಿ ಮೂರು ಖಾಸಗಿ ಕಂಪೆನಿಗಳಿಗೆ ಅವಕಾಶ ನೀಡಲಾಗಿದೆ.

3ಜಿ ಮೊಬೈಲ ಸೇವೆಯಿಂದಾಗಿ ಹೈ-ಸ್ಪೀಡ್ ಇಂಟರ್‌ನೆಟ್ ಸೇರಿದಂತೆ ಇತರ ಬ್ರಾಡ್‌ಬ್ಯಾಂಡ್ ಸೌಲಭ್ಯಗಳನ್ನು ಪಡೆಯಬಹುದಾಗಿದೆ.3ಜಿ ಸ್ಪೆಕ್ಟ್ರಂ ಹರಾಜಿಗಾಗಿ ಅರ್ಜಿಯನ್ನು ರವಾನಿಸಲಾಗಿದೆ ಎಂದು ಭಾರ್ತಿ ಏರ್‌ಟೆಲ್ ಕಂಪೆನಿಯ ವಕ್ತಾರರು ತಿಳಿಸಿದ್ದಾರೆ.

3ಜಿ ಸ್ಪೆಕ್ಟ್ರಂ ಹರಾಜು ಪ್ರಕ್ರಿಯೆ ಹಲವಾರು ಬಾರಿ ಮುಂದೂಡಲಾಗಿದೆ.ಪ್ರತಿಯೊಂದು ವಲಯಗಳಿಗೆ ಕಂಪೆನಿಗಳ 3ಜಿ ಸ್ಪೆಕ್ಟ್ರಂ ಹಂಚಿಕೆ ಕುರಿತಂತೆ ವಿವಾದ ಉಲ್ಬಣಿಸಿದ ಹಿನ್ನೆಲೆಯಲ್ಲಿ ವಿಳಂಬವಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ