ವಾಣಿಜ್ಯ ಸುದ್ದಿ | ಷೇರುಸೂಚ್ಯಂಕ | ಮಾರುಕಟ್ಟೆ ದರ
ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಅಗತ್ಯ ವಸ್ತುಗಳ ದರಗಳಲ್ಲಿ ಇಳಿಕೆಯಾಗುತ್ತಿದೆ:ಪವಾರ್ (Sharad Pawar | Agriculture | Essential commodities | Inflation)
Bookmark and Share Feedback Print
 
ಸಕ್ಕರೆ ಹಾಗೂ ಅಗತ್ಯ ಅಹಾರಧಾನ್ಯ ವಸ್ತುಗಳ ದರಗಳಲ್ಲಿ ಇಳಿಕೆಯಾಗುತ್ತಿವೆ ಎಂದು ಕೇಂದ್ರ ಕೃಷಿ ಖಾತೆ ಸಚಿವ ಶರದ್ ಪವಾರ್ ಹೇಳಿದ್ದಾರೆ.

ಅಗತ್ಯ ವಸ್ತುಗಳ ದರಗಳಲ್ಲಿ ಇಳಿಕೆಯಾಗುತ್ತಿರುವುದು ಶುಭ ಸಂಕೇತವಾಗಿದೆ ಎಂದು ಸಚಿವ ಪವಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ದರ ಏರಿಕೆಯನ್ನು ನಿಯಂತ್ರಿಸದ ಹಿನ್ನೆಲೆಯಲ್ಲಿ, ಯುಪಿಎ ಮಿತ್ರ ಪಕ್ಷಗಳಿಂದಲೇ ತರಾಟೆಗೆ ಒಳಗಾಗಿದ್ದ, ಸಚಿವ ಪವಾರ್, ಹಣದುಬ್ಬರ ಏರಿಕೆ ಕುರಿತಂತೆ ವಿವರಣೆ ನೀಡಲು ತಾವು ಆರ್ಥಿಕ ತಜ್ಞರಲ್ಲ.ಸಾಮಾನ್ಯ ಕೃಷಿಕನಾಗಿದ್ದೇನೆ ಎಂದು ಕಿಡಿಕಾರಿದ್ದರು.

ಅಹಾರಧಾನ್ಯ ವಸ್ತುಗಳ ದರ ಏರಿಕೆಯಿದಾಗಿ ಜನೆವರಿ ತಿಂಗಳಲ್ಲಿ ಶೇ.8.56ರಷ್ಟಿದ್ದ ಹಣದುಬ್ಬರ ದರ, ಫೆಬ್ರವರಿ ತಿಂಗಳ ಅವಧಿಯಲ್ಲಿ ಶೇ.9.89ರಷ್ಟು ಏರಿಕೆ ಕಂಡಿತ್ತು.

ಕಳೆದ ಕೆಲ ದಿನಗಳಿಂದ ನಿರಂತರವಾಗಿ ಏರಿಕೆ ಕಾಣುತ್ತಿರುವ ಅಹಾರ ಧಾನ್ಯಗಳ ದರ ಏರಿಕೆಯಿಂದಾಗಿ. ಪ್ರಮುಖ ವಿರೋಧ ಪಕ್ಷವಾದ ಬಿಜೆಪಿ ಹಾಗೂ ಎಡ ಪಕ್ಷಗಳಿಂದ ಸರಕಾರ ತೀವ್ರ ತರಾಟೆಗೆ ಒಳಗಾಗಿತ್ತು.
ಸಂಬಂಧಿತ ಮಾಹಿತಿ ಹುಡುಕಿ